ಆ.23ರಂದು ತಾಲೂಕು ಮಟ್ಟದ ಭಜಕೆರೆ ಗೊಬ್ಬು

0
8

ಮೂಡಬಿದಿರೆ : ತಾಲೂಕು ಭಜನಾ ಪರಿಷತ್ ನ ಶ್ರೀ ಕುಂಭಕಂಠಿಣಿ ಭಜನಾ ಮಂಡಳಿ ಅಚ್ಚರಕಟ್ಟೆ ಪಡುಮಾರ್ನಾಡ್ ಇದರ ಮುಂದಾಳತ್ವದಲ್ಲಿ ಆಗಸ್ಟ್ 23ಕ್ಕೆ ನಡೆಯಲಿರುವ ಭಜಕೆರೆ ಗೊಬ್ಬು ಕೆಸರಿನ ಕ್ರೀಡಾ ಕೂಟದಲ್ಲಿ ಮೂಡಬಿದ್ರಿ ತಾಲೂಕಿನ ಎಲ್ಲಾ ಭಜನಾ ಮಂಡಳಿಗಳ ಮಕ್ಕಳು, ಪೋಷಕರು, ಪದಾಧಿಕಾರಿಗಳು, ಸದಸ್ಯರಿಗೆ ಭಾಗವಹಿಸುವ ಮುಕ್ತ ಅವಕಾಶವನ್ನು ಕಲ್ಪಿಸಿದೆ.

ಬೆಳಿಗ್ಗೆ ಉದ್ಘಾಟನಾ ಸಮಾರಂಭ, ಮದ್ಯಾಹ್ನ ಸಭಾಕಾರ್ಯಕ್ರಮ ಸಂಜೆ ಸಮಾರೋಪ ಕಾರ್ಯಕ್ರಮ ಪ್ರಮುಖ ಅತಿಥಿ ಗಣ್ಯರು ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಲಿದೆ.

ಇದರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಕಮ್ಮಾಟದಲ್ಲಿ ಭಾಗವಹಿಸಿ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಮೂಡಬಿದ್ರಿ ತಾಲೂಕಿನ ಹೆಸರಾಂತ ಗುರುಗಳಿಗೆ ಸನ್ಮಾನ, ಆಶಾ ಕಾರ್ಯಕರ್ತೆಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಪಡುಮಾರ್ನಾಡಿನ ಬಹುಮುಖ ಬಾಲ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕೆಸರುಡೊಂಜಿ ದಿನ ಮತ್ತು ಆಟಿ ತಿಂಗಳ ವಿಶೇಷತೆಯ ಹಿನ್ನೋಟದ ವಿಚಾರ ಧಾರೆಗಳು ವೇದಿಕೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಚಲನಚಿತ್ರ ನಟರು, ರಂಗಭೂಮಿ ಕಲಾವಿದರು, ಮತ್ತು ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರು ಭಾಗವಹಿಸಲಿದ್ದಾರೆ. ಎಂದು ಶ್ರೀ ಕುಂಭ ಕಂಠಿಣಿ ಸಂಸ್ಥೆಯ ಸಂಸ್ಥಾಪಕ ಮತ್ತು ಭಜನಾ ಮಂಡಳಿಯ ಅಧ್ಯಕ್ಷರು ಪ್ರವೀಣ್. ಆರ್. ಕೋಟ್ಯಾನ್ ಮತ್ತು ಕಾರ್ಯದರ್ಶಿ ರಮೇಶ್ ಮತ್ತು ಈಗಿನ ನೂತನ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಯಶಸ್ಸಿಗೆ ತಾಲೂಕಿನ ಎಲ್ಲಾ ಮಂಡಳಿಗಳ ಮತ್ತು ಇತರ ಸಂಘಟನೆಗಳ, ಸಂಘ ಸಂಸ್ಥೆಗಳ ಸಹಕಾರ ವನ್ನು ಕೋರಿದ್ದಾರೆ.