ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಬಿಷಪ್ ಜೇಮ್ಸ್ ಪಟೇರಿಯಲ್ ಅವರಿಗೆ ಶಾಸಕ ಹರೀಶ್ ಪೂಂಜ ಅಭಿನಂದನೆ

0
9

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನೂತನ ಬಿಷಪ್ ಜೇಮ್ಸ್ ಪಟೇರಿಯಲ್ ಅವರನ್ನು ಶಾಸಕ ಹರೀಶ್ ಪೂಂಜ ಅವರು ಇಂದು ಮಿಥಿಲಾದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಿಷಪ್ ಜೇಮ್ಸ್ ಪಟೇರಿಯಲ್ ಅವರಿಗೆ ಶುಭಾಶಯ ಕೋರಿ, ಧರ್ಮಪ್ರಾಂತ್ಯದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಇನ್ನಷ್ಟು ವಿಸ್ತರಿಸಲಿ ಎಂದು ಶಾಸಕ ಹರೀಶ್ ಪೂಂಜ ಹಾರೈಸಿದರು. ಭೇಟಿಯ ವೇಳೆ ಪರಸ್ಪರ ಸೌಹಾರ್ದಯುತ ಮಾತುಕತೆ ನಡೆಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸಲರ್ ಫಾ. ಲಾರೆನ್ಸ್ ಪುನೋಳಿ, ವಿಕಾರ್ ಜನರಲ್ ಫಾ. ಮಾನಿ, ಪ್ರೋಕ್ಯುರೇಟರ್ ಫಾ. ಸನ್ನಿ ಅಲಪಾಟ್, ಡಿಕೆಆರ್‌ಡಿಎಸ್ ನಿರ್ದೇಶಕರಾದ ಫಾ. ಆದರ್ಶ್, ಫಾ. ಕುರಿಯಕೋಸ್, ಫಾ. ಜೋಸೆಫ್ ಚೀರನ್, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಸೆಬಾಸ್ಟಿಯನ್, ಸಮಾಜ ಬಾಂಧವರು ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದು ನೂತನ ಬಿಷಪ್ ಅವರಿಗೆ ಶುಭಾಶಯ ಸಲ್ಲಿಸಿದರು.