“ವಿಬಿ-ಜಿ ರಾಮ್ ಜಿ” ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಹಾಗು ಮಾಹಿತಿ ಕಾರ್ಯಾಗಾರ

0
11

ಬೆಳ್ತಂಗಡಿ : ದಿನಾಂಕ: 04-08-2026 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ “ವಿಬಿ-ಜಿ ರಾಮ್ ಜಿ” ಯೋಜನೆ ಬಗ್ಗೆ ಗ್ರಾಮಸ್ಥರಿಗೆ ಜಾಗೃತಿ ಹಾಗು ಮಾಹಿತಿ ಕಾರ್ಯಾಗಾರ ನಡೆಯಿತು.

ಈ ಸಂದರ್ಭದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಜಿಲ್ಲಾ ಐಇಸಿ ಸಂಯೋಜಕಿ ಸುನಿತಾ ಅವರು ನೂತನ ಯೋಜನೆ‌ ಹಾಗೂ ಅದರ ರೂಪುರೇಷೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಪುರುಷೋತ್ತಮ ಜಿ, ಕಾರ್ಯದರ್ಶಿ ಸರೋಜಿನಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸಂಜೀವ, ಪಂಚಾಯತ್ ಸಿಬ್ಬಂದಿಗಳಾದ ಸುಕೇಶ್, ಪ್ರಕಾಶ್, ಜಯಶ್ರೀ, ನಳಿನಾಕ್ಷಿ, ಅಶ್ವಿನಿ, ಅಂಜಲಿ, ಗ್ರಂಥಾಲಯ ಮೇಲ್ವಿಚಾರಕರು ಜ್ಯೋತಿ, vrw ಚೇತನ್ ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು. ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಹಾಗೂ ವಿಬಿ‌-ಜಿ ರಾಮ್ ಜಿ ಯೋಜನೆಯ ಫಲಾನುಭವಿಗಳು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.