ಬಿಲ್ಲವ ಸಂಘ( ರಿ) ಕಲ್ಲಡ್ಕ ವಲಯ,ಹಾಗೂ ಬಿಲ್ಲವ ಮಹಿಳಾ ಘಟಕ ಕಲ್ಲಡ್ಕ ವಲಯ ಆಶ್ರಯದಲ್ಲಿ ಕುಟುಂಬ ಮಿಲನ – 2026 ಕಾರ್ಯಕ್ರಮ

0
6

ಕಲ್ಲಡ್ಕ : ಬಿಲ್ಲವ ಸಂಘ( ರಿ) ಕಲ್ಲಡ್ಕ ವಲಯ, ಬಿಲ್ಲವ ಮಹಿಳಾ ಘಟಕ ಕಲ್ಲಡ್ಕ ವಲಯ ಆಶ್ರಯದಲ್ಲಿ ಗೋಳ್ತಮಜಲ್,ವೀರಕಂಭ, ಬಾಳ್ತಿಲ, ಅಮ್ಟೂರು, ಬೋಳಂತೂರು, ಬೊಂಡಲ, ಬಿಲ್ಲವ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ಬಿಲ್ಲವ ಕುಟುಂಬ ಮಿಲನ – 2026 ಕಾರ್ಯಕ್ರಮ ದಿನಾಂಕ 9-8-2026 ರವಿವಾರ ಬೆಳಿಗ್ಗೆ ಗಂಟೆ 9 ರಿಂದ ವೀರಕಂಭ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೂಜಾರಿ ತೆಕ್ಕಿಪಾಪು ರವರ ಮನೆಯ ವಠಾರದಲ್ಲಿ ಜರಗಲಿರುವುದು. ಈ ಸಂದರ್ಭದಲ್ಲಿ ಬಿಲ್ಲವ ಬಂಧುಗಳಿಗೆ ವಿವಿಧ ಮನರಂಜನ ಸ್ಪರ್ಧೆಗಳು, ಜಾನಪದ ನೃತ್ಯ ಕಾರ್ಯಕ್ರಮಗಳು ಜರಗಳಿದ್ದು ಬಿಲ್ಲವ ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ..