ಶಿವಶಕ್ತಿ ಫ್ರೆಂಡ್ಸ್‌ ಬಾಕ್ರಬೈಲು ವತಿಯಿಂದ ಸೆ.6 ಮತ್ತು 7ರಂದು ‘ಮೊಸರು ಕುಡಿಕೆ’ ಉತ್ಸವ

0
7

ಮಂಜೇಶ್ವರ: ಶಿವಶಕ್ತಿ ಫ್ರೆಂಡ್ಸ್‌ ಬಾಕ್ರಬೈಲು ಪಾತೂರು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಮೊಸರು ಕುಡಿಕೆ ಉತ್ಸವ–2026’ ಅನ್ನು ಸೆಪ್ಟೆಂಬರ್ 6 ಮತ್ತು 7ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮೂಡಾಯಿಬೆಟ್ಟು ಮೈದಾನದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ.

ಉತ್ಸವದ ಅಂಗವಾಗಿ ಸೆಪ್ಟೆಂಬರ್ 7ರಂದು ಸೋಮವಾರ ಸಂಜೆ 6 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ಚಾ ಪರ್ಕ ಕಲಾವಿದೆರ್‌ ಕುಡ್ಲ ಅಭಿನಯಿಸುವ ರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿ ದಾಖಲೆ ಪ್ರದರ್ಶನ ಕಂಡ ‘ಯಾನೊರಿ ಬರೋಲಿಯಾ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಿವಶಕ್ತಿ ಫ್ರೆಂಡ್ಸ್‌ ಬಾಕ್ರಬೈಲು ಮನವಿ ಮಾಡಿದೆ.