ಲಯನ್ಸ್ ಕ್ಲಬ್ ಮಂಗಳೂರು ಸ್ಫೂರ್ತಿ: 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಜೃಂಭಣೆ

0
6

ಮಂಗಳೂರು : ಲಯನ್ಸ್ ಕ್ಲಬ್ ಮಂಗಳೂರು ಸ್ಫೂರ್ತಿ ವತಿಯಿಂದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಕದ್ರಿಯಲ್ಲಿರುವ ಲಯನ್ಸ್ ಅಶೋಕ ಸೇವಾಭವನದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ 317-ಡಿ ಪ್ರಥಮ ಉಪ ಜಿಲ್ಲಾ ಗವರ್ನರ್ ಹಾಗೂ ಪದಗ್ರಹಣಾಧಿಕಾರಿ ಲಯನ್ ಗೋವರ್ಧನ್ ಶೆಟ್ಟಿ MJF ಅವರು ನೂತನ ಅಧ್ಯಕ್ಷ ಲಯನ್ ಚಂದ್ರಹಾಸ್ ಕದ್ರಿ MJF, ಕಾರ್ಯದರ್ಶಿ ಲಯನ್ ನವನೀತ್ ಬಿ.ಆ‌ರ್., ಖಜಾಂಚಿ ಲಯನ್ ಜಗದೀಶ್ ಆಚಾರ್ ಸೇರಿದಂತೆ ನೂತನ ಪದಾಧಿಕಾರಿಗಳು ಹಾಗೂ ನಿರ್ದೇಶಕ ಮಂಡಳಿಗೆ ಪದಗ್ರಹಣ ಬೋಧಿಸಿದರು. ಇದೇ ವೇಳೆ ಕ್ಲಬ್‌ಗೆ ಸೇರ್ಪಡೆಯಾದ ಏಳು ನೂತನ ಸದಸ್ಯರನ್ನು ಅಧಿಕೃತವಾಗಿ ಲಯನ್ಸ್‌ ಸಂಸ್ಥೆಗೆ ಬರಮಾಡಿಕೊಳ್ಳಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಲಯನ್ ಚಂದ್ರಹಾಸ್ ಕದ್ರಿ ವಹಿಸಿದ್ದರು. ದ್ವಿತೀಯ ಉಪ ಜಿಲ್ಲಾ ಗವರ್ನರ್ ಲಯನ್ ವೆಂಕಟೇಶ್ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷೆ ಲಯನ್‌ ಜ್ಯೋತಿ ಚಂದ್ರ, ವಲಯ ಅಧ್ಯಕ್ಷೆ ಲಯನ್ ಹರಿಣಿ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಡಾ. ಲಯನ್ ನಿತಿನ್ ಆಚಾರ್ಯ, ಕಾರ್ಯದರ್ಶಿ ಲಯನ್ ನವನೀತ್ ಬಿ.ಆರ್., ಖಜಾಂಚಿ ಲಯನ್ ಜಗದೀಶ್ ಆಚಾ‌ರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ PMCC ಲಯನ್ ವಸಂತ ಕುಮಾರ್ ಶೆಟ್ಟಿ ಹಾಗೂ ವಿಸ್ತರಣಾ ಅಧ್ಯಕ್ಷ ಲಯನ್ ಮನೋರಂಜನ್ ಕೆ.ಆರ್. ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಸಮಾಜದ ಅಗತ್ಯವಿರುವ ಅರ್ಹ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಿಸುವ ಮೂಲಕ ಅರ್ಥಪೂರ್ಣ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಜಿಲ್ಲೆ 317-ಡಿ ವ್ಯಾಪ್ತಿಯ ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು, ಲಯನ್ ಮುಖಂಡರು, ಗಣ್ಯರು ಹಾಗೂ ಸದಸ್ಯರು ಭಾಗವಹಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮವು ಸೌಹಾರ್ದ ಕೂಟ ಹಾಗೂ ಭೋಜನದೊಂದಿಗೆ ಯಶಸ್ವಿಯಾಗಿ ಸಮಾಪ್ತಿಯಾಯಿತು.