ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0
6

ಮೂಡುಬಿದಿರೆ : ತಾಲೂಕಿನ ಪುತ್ತಿಗೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ, ಪುತ್ತಿಗೆ ಗುಡ್ಡೆಯಂಗಡಿಯ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.22ರಂದು ಸಂಘದ ವಠಾರದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಸುಚರಿತ ಶೆಟ್ಟಿ ಕೆ.ಪಿ. ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. 2026ರ ಮಾರ್ಚ್ 31ರ ಅಂತ್ಯಕ್ಕೆ ಸಂಘದ ಪಾಲು ಬಂಡವಾಳವು ರೂ.84,60,970 ಆಗಿದ್ದು, ಸಂಘದಲ್ಲಿ ಒಟ್ಟು 2,432 ಸದಸ್ಯರು ಇದ್ದಾರೆ. 2025–26ನೇ ಸಾಲಿನಲ್ಲಿ ಸಂಘವು ರೂ.9,20,340.58 ನಿವ್ವಳ ಲಾಭ ಗಳಿಸಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಂಘದ ಸದಸ್ಯರ ಮಕ್ಕಳಲ್ಲಿ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 80%ಕ್ಕಿಂತ ಹೆಚ್ಚು ಅಂಕ ಗಳಿಸಿದ 22 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಸದಸ್ಯರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಚರ್ಚೆ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತೃಪ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಾಧ್ಯಕ್ಷರಾದ ಶಶಿಧರ ಪಿ. ನಾಯಕ್ ವಂದನಾರ್ಪಣೆ ಮಾಡಿದರು.

ಪ್ರಸ್ತುತ ಆಡಳಿತ ಮಂಡಳಿ

ಸುಚರಿತ ಶೆಟ್ಟಿ ಕೆ.ಪಿ. – ಅಧ್ಯಕ್ಷರು,ಶಶಿಧರ ಪಿ. ನಾಯಕ್ – ಉಪಾಧ್ಯಕ್ಷರು, ನಾರಾಯಣ ಮಡಿವಾಳ – ನಿರ್ದೇಶಕರು, ಪಿ. ವಿಶ್ವನಾಥ ನಾಯ್ಕ – ನಿರ್ದೇಶಕರು,ನಾಗರಾಜ ಹೆಗಡೆ – ನಿರ್ದೇಶಕರು,ನೀರಜಾಕ್ಷಿ ಎಸ್. ಶೆಟ್ಟಿ – ನಿರ್ದೇಶಕರು, ವಿನುತ ಹೆಗ್ಡೆ – ನಿರ್ದೇಶಕರು, ಸುಕೇಶ್ ಪೂಜಾರಿ – ನಿರ್ದೇಶಕರು, ಸತೀಶ್ ಕಾವ – ನಿರ್ದೇಶಕರು,
ಪೌಲ್ ಡಿ’ಸೋಜಾ – ನಿರ್ದೇಶಕರು,ರಮೇಶ್ – ನಿರ್ದೇಶಕರು,ಕಿಶೋರ್ ಕುಮಾರ್ – ನಿರ್ದೇಶಕರು, ಸಂಜಯ್ ಅತಿಕಾರಿ – ವಲಯ ಮೇಲ್ವಿಚಾರಕರು.