ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ 98 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಸೇತುವೆ ಮರು ನಿರ್ಮಾಣ

0
8

ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ಮುತ್ವರ್ಜಿಯಲ್ಲಿ ಸುಮಾರು 98 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಸೇತುವೆಗಳು ಮರು ನಿರ್ಮಾಣವಾಗಲಿದೆ, ಶಾಸಕ ಉಮಾನಾಥ ಕೊಟ್ಯಾನ್ ಅವರು ಕಳೆ ಕೆಲ ಸಮಯದಿಂದ ಈ ಮೂರು ಸೇತುವೆ ಮರುನಿರ್ಮಾಣಕ್ಕೆ ಪ್ರಯತ್ನ ಪಟ್ಟಿದ್ದು ಇದೀಗ ಕಾರ್ಯರೂಪಕ್ಕೆ ಬರುವುದರಲ್ಲಿಇದೆ. ಕಟೀಲು ಮರವೂರು, ಪಲಿಮಾರು ಸೇತುವೆಗಳ ಮರುನಿರ್ಮಾಣಕ್ಕೆ ಇದೀಗ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಂಗಳೂರಿನಿಂದ ಸಂಪರ್ಕ ಕಲ್ಪಿಸುವ ದೇವಳದ ಸಮೀಪ ಇರುವ ಸೇತುವೆ ತುಂಬಾ ಹಳೆಯ ಸೇತುವೆ , ಇದೀಗ ನೂತನ ಸೇತುವೆಯ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿ ಇದ್ದು ಒಟ್ಟು 33 ಕೋಟಿ ರೂಪಾಯಿ ವೆಚ್ಚದಲ್ಲಿ 16 ಮೀಟರ್ ಅಗಲದಲ್ಲಿ
ಈ ಸೇತುವೆ ನಿರ್ಮಾಣವಾಗಲಿದೆ.
ದೇವಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮತ್ತು ರಸ್ತೆ ಅತ್ಯಂತ ಕಿರಿದಾಗಿದ್ದು, ಪ್ರತೀ ನಿತ್ಯ ಸಾವಿರಾರು ವಾಹನಗಳು ಸಂಚರಿಸುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ, ಪ್ರತೀ ಶುಕ್ರವಾರ ರಜಾದಿನ ಮತ್ತು ವಿಶೇಷ ದಿನಗಳಲ್ಲಿ ಜನಸಂದಣಿ ಹೆಚ್ಚಾಗಿ ವಾಹನ ದಟ್ಟಣೆಯಿಂದ ಬ್ಲಾಕ್ ಆಗುತ್ತದೆ, ಅಲ್ಲದೆ ಕಿನ್ನಿಗೋಳಿ, ಮುಂಡ್ಕೂರು, ಬೆಳ್ಮಣ್ ಕಡೆಗಳಿಗೆ ಈ ರಸ್ತೆಯ ಸಂಪರ್ಕ ಕಲ್ಪಿಸುದರಿಂದ ವಾಹನ ದಟ್ಟಣೆ ಹೆಚ್ಚಿರುತ್ತದೆ, ಬಳ್ಕುಂಜೆ ಕರ್ನಿರೆಯಿಂದ ಉಡುಪಿ ಜಿಲ್ಲೆಗೆ ಫಲಿಮಾರು ಮೂಲಕ ಸಂಪರ್ಕ ಕಲ್ಪಿಸುವ ಸೇತುವೆ ಮತ್ತೊಂದು ಈ ಸೇತುವೆ ಅಡಿಭಾಗದಲ್ಲಿ ಬಿರುಕು ಬಿಟ್ಟಿದೆ, ಸಂಚಾರಕ್ಕೆ ಯೋಗ್ಯವಲ್ಲ ಎಂದು ಅಧಿಕಾರಿಗಳು ತಿಳಿಸಿದ ನಂತರ ಕಳೆದ ಒಂದುವರೆ ವರ್ಷದ ಹಿಂದೆ ಈ ಸೇತುವೆಯಲ್ಲಿ ಘನ ವಾಹನಗಳನ್ನು ನಿಷೇದಿಸಲಾಗಿದೆ, ಈ ಕಾರಣದಿಂದ ಬಸ್ಸು ಲಾರಿಗಳು ಓಡಾಟ ನಿಲ್ಲಿಸಿದ ಕಾರಣ ಜನರಿಗೆ ತುಂಭಾ ಸಮಸ್ಯೆಯಾಗಿದೆ. ಇದೀಗ 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಮತ್ತೊಂದು ಮಂಗಳೂರಿಗೆ ಸಂಪರ್ಕ‌ ಕಲ್ಪಿಸುವ ಮರವೂರಿನಲ್ಲಿರುವ ಸೇತುವೆ ಇಲ್ಲಿನ ಹಳೆಯ ಸೇತುವೆ ಕುಸಿದ ಕಾರಣ ಸುಮಾರು ಒಂದು ವರ್ಣದಿಂದ ಹೊಸ ಸೇತುವೆಯ ಮೂಲಕ ವಾಹನ ಸಂಚಾರವಾಗುತ್ತಿದೆ, ವಾಹನ ದಟ್ಟಣೆ ಹೆಚ್ಚರುವ ಮತ್ತು ಹಳೆಯ ಸೇತುವೆ ಕುಸಿದ ಕಾರಣ ಇಲ್ಲಿ 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ


ಕಟೀಲು ದೇವಳದ ಸಮೀಪ ಇರುವ ಅತ್ಯಂತ ಹಳೆಯ ಸೇತುವೆಯಾಗಿದ್ದು, ಆಕ್ಟೋಬರ್ ೯ ೧೯೩೯ ರಲ್ಲಿ ಆಗಿನ ಮೈಸೂರು ಸರಕಾರದಲ್ಲಿ ದೀವಾನರಾಗಿದ್ದ ಮಿರ್ಝ ಮೊಹಮ್ಮದ್ ಇಸ್ಮಾಯಿಲ್ ಅವರು ಈ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು. ೭೩೨೦೦ ರೂಪಾಯಿಯಲ್ಲಿ ನಿರ್ಮಾಣವಾಗಿದೆ
ಸೇತುವೆಯ ಮೇಲ್ಭಾಗದಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿದ್ದು ಹಲವಾರು ಬಾರಿ ಇದನ್ನು ಮುಚ್ಚಲಾಗಿತ್ತು, ಸ್ಥಳೀಯವಾಗಿ ಅತ್ಯಂತ ಹಳೆಯ ಸೇತುವೆ ಇದಾಗಿದೆ.
ಅಗಲ ಕಿರಿದಾದ ಈ ಸೇತುವೆಯಲ್ಲಿ ಎರಡೂ ಕಡೆಗಳಿಂದ ವಾಹನಗಳು ಸಂಚರಿಸುವ ಸಂದರ್ಭ ಸಂಚಾರ ಕಷ್ಟ ಸಾಧ್ಯವಾಗಿದೆ, ಈ ಸೇತುವೆ ಆಗಿನ ಧಾರಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಮಿಸಿದ್ದು, ಇಂದು ವಾಹನಗಳ ಸಂಖ್ಯೆ ಅದಕ್ಕಿಂತ ಇನ್ನೂ ಜಾಸ್ತಿ ಆಗಿದೆ.


ಶ್ರೀ ಕ್ಷೇತ್ರ ಕಟೀಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ, ಈ ಸಂದರ್ಭ ವಾಹನದಟ್ಟಣೆಯನ್ನು ಕಂಡಿದ್ದೇನೆ ಮುಖ್ಯವಾಗಿ ಇಲ್ಲಿನ ಸೇತುವೆ ಅಗಲ ಕಿರಿದಾಗಿದ್ದು, ಇಲ್ಲಿಗೆ ಅಗಲವಾದ ಸೇತುವೆ ನಿರ್ಮಾಣವಾಗ ಬೇಕೆಂದು ಹಲವು ಸಮಯದಿಂದ ಪ್ರಯತ್ನದಲ್ಲಿದ್ದೆ, ಮುಗ್ರೋಡಿ ಕನ್ಟ್ರಕ್ಷನ್ ಇಂಜಿನೀಯರ್ಸ್ ಮತ್ತು ಶ್ರೀ ಕ್ಷೇತ್ರ ಕಟೀಲಿನ ಹರಿ ಆಸ್ರಣ್ಣರ ಜೊತೆ ಮಾತುಕತೆ ನಡೆಸಿ ಒಂದು ಯೋಜನೆ ನಡೆಸಿದ್ದು,
ಇದೀಗ ಕಾಲ ಕೂಡಿ ಬಂದಿದೆ, ದುರ್ಗೆಯ ಅನುಗ್ರಹದಿಂದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರ ಸಹಕಾರದಿಂದ ಸೇತುವೆ ನಿರ್ಮಾಣವಾಗಲಿದೆ, ಇದೀಗ ಟೆಂಡರ್ ಹಂತದಲ್ಲಿದೆ ಇದರ ಜೊತೆ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಫಲಿಮಾರು ಸೇತುವೆ ಮತ್ತು ಮರವೂರು ಸೇತುವೆ ಕೂಡ ಮರು ನಿರ್ಮಾಣವಾಗಲಿದೆ. ಒಟ್ಟು 98 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಸೇತುವೆ ನಿರ್ಮಾಣವಾಗಲಿದೆ.

ಉಮಾನಾಥ ಕೋಟ್ಯಾನ್ ಶಾಸಕರು ಮೂಲ್ಕಿ ಮೂಡಬಿದ್ರೆ

ಫಲಿಮಾರು ಸೇತುವೆ ಶಾಸಕರ ಪ್ರಯತ್ನದಿಂದ ಮರುನಿರ್ಮಾಣ ಆಗುತಿರುವುದನ್ನು ಸ್ವಾಗತಿಸುತ್ತೇವೆ, ಈ ಸೇತುವೆಯಲ್ಲಿ ಘನ ವಾಹನಗಳನ್ನು ನಿಷೇದಿಸಿ 2 ವರ್ಷ ಆಗಿದೆ, ಈ ಮಾರ್ಗದಲ್ಲಿ ಒಟ್ಟು 15 ಬಸ್ಸುಗಳು ದಿನನಿತ್ಯ ಸಂಚರಿಸುತ್ತಿದ್ದು, ಈ ಬಸ್ಸುಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ, ಬದಲಿ ಮಾರ್ಗ ಸಂಚಾರ ಹೋಗಲು ಮತ್ತು ಬರಲು ಒಟ್ಟು 40 k.m ಹೆಚ್ಚಿನ ಸಂಚಾರವಾಗುತ್ತದೆ. ಅಧಿಕಾರಿಗಳ ಆದೇಶದಲ್ಲಿ ಘನವಾಹನ‌ ನಿಷೇಧ ಎಂದು ಸ್ಪಷ್ಟವಾಗಿದೆ, ಬಸ್ಸು ಘನವಾಹನದಲ್ಲಿ ಕೆಟಗರಿಯಲ್ಲಿ ಬರುವುದಿಲ್ಲ, ಸೇತುವೆ ನಿರ್ಮಾಣ ಪೂರ್ಣಗೊಳ್ಳುವಾಗ ಇನ್ನೂ ಎರಡು ವರ್ಷ ಕಳೆಯಬಹುದು ಅದುವರೆಗೆ ಬಸ್ಸುಗಳ ಓಡಾಟಕ್ಕೆ ಸಂಪರ್ಕ ಕಲ್ಪಿಸಬೇಕು

ದುರ್ಗಾಪ್ರಸಾದ್ ಹೆಗ್ಡೆ
ಅಧ್ಯಕ್ಷರು ಬಸ್ಸು ಮಾಲಕರ ಸಂಘ