ಕುಟುಂಬ ಮಿಲನ – 2026 ಕಾರ್ಯಕ್ರಮ

0
6

ಬಿಲ್ಲವ ಸಂಘ( ರಿ) ಕಲ್ಲಡ್ಕ ವಲಯ,ಹಾಗೂ ಬಿಲ್ಲವ ಮಹಿಳಾ ಘಟಕ ಕಲ್ಲಡ್ಕ ವಲಯ ಆಶ್ರಯದಲ್ಲಿ ಕುಟುಂಬ ಮಿಲನ – 2026 ಕಾರ್ಯಕ್ರಮ ಸಮಾಜ ಬಾಂಧವರ ಕಷ್ಟ ಸುಖಗಳನ್ನು ಅರಿಯಲು ಕುಟುಂಬ ಮಿಲನ ಕಾರ್ಯಕ್ರಮ ಸಹಕಾರಿಯಾಗಿದೆ.. ರುಕ್ಮಯ ಪೂಜಾರಿ. ಕಲ್ಲಡ್ಕ : ಸಮಾಜ ಬಾಂಧವರ ಕಷ್ಟ ಸುಖಗಳನ್ನು ಅರಿಯಲು ಕುಟುಂಬ ಮಿಲನ ಕಾರ್ಯಕ್ರಮ ಸಹಕಾರಿಯಾಗಿದೆ.

ಎಂದು ಮಾಜಿ ಶಾಸಕ ರುಕ್ಮಿಯ ಪೂಜಾರಿ ಏಳ್ತಿಮಾರು ಹೇಳಿದರು. ಅವರು ಅಗೋಸ್ಟ್ 9 ಭಾನುವಾರ ವೀರಕಂಭ ಗ್ರಾಮದ ತೆಕ್ಕಿಪಾಪು ಪ್ರಶಾಂತ್ ಪೂಜಾರಿರವರ ಮನೆಯ ವಠಾರದಲ್ಲಿ ಮೋನಪ್ಪ ಪೂಜಾರಿ ತೆಕ್ಕಿಪಾಪು ಬೇದಿಕೆಯಲ್ಲಿ ಬಿಲ್ಲವ ಸಂಘ( ರಿ) ಕಲ್ಲಡ್ಕ ವಲಯ, ಬಿಲ್ಲವ ಮಹಿಳಾ ಘಟಕ ಕಲ್ಲಡ್ಕ ವಲಯ ಆಶ್ರಯದಲ್ಲಿ ಗೋಳ್ತಮಜಲ್,ವೀರಕಂಭ, ಬಾಳ್ತಿಲ, ಅಮ್ಟೂರು, ಬೋಳಂತೂರು, ಬೊಂಡಲ, ಬಿಲ್ಲವ ಗ್ರಾಮ ಸಮಿತಿಗಳ ಸಹಕಾರದೊಂದಿಗೆ ನಡೆದ ಬಿಲ್ಲವ ಕುಟುಂಬ ಮಿಲನ – 2026 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಲ್ಲವ ಬಂಧುಗಳಿಗೆ ವಿವಿಧ ಮನರಂಜನ ಸ್ಪರ್ಧೆಗಳು, ಜಾನಪದ ನೃತ್ಯ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ತುಳುನಾಡಿನ ಸಾಮ್ರಾದಾಯಕ ಶೈಲಿಯ ಊಟ ಉಪಚಾರದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ಸುರೇಂದ್ರ ಅಮೀನ್ ಮರಕಡಬೈಲು, ಮನಮೋಹನ ಅಮ್ಟೂರು, ಗುರುವಪ್ಪ ಪೂಜಾರಿ ಪಾದೆ, ಕರುಣಾಕರ ಪೂಜಾರಿ ಬಲ್ಕಟ,ನಳಿನಿ ಮೋನಪ್ಪ ಪೂಜಾರಿ ತೆಕ್ಕಿಪಾಪು, ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷ ಲಾವಣ್ಯ ಸುಂದರ, ಕಲ್ಲಡ್ಕ ಬಿಲ್ಲವ ಸಂಘದ ಕಾರ್ಯದರ್ಶಿ ರಮೇಶ್ ಪೂಜಾರಿ ಹೊಸಕಟ್ಟ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾಲಿಯನ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಜಯಪ್ರಕಾಶ್ ತೆಕ್ಕಿಪಾಪ್ ಮನವಿ ಪತ್ರ ವಾಚಿಸಿ, ರವೀಂದ್ರ ಪಾದೆ ವಂದಿಸಿದರು. ದಿನೇಶ್ ಕೃಷ್ಣಕೋಡಿ, ಹಾಗೂ ಕೃತಿ ಪೂಜಾರ್ತಿ ಕುಂಟಿಪಾಪು ಕಾರ್ಯಕ್ರಮ ನಿರೂಪಿಸಿದರು.