ಶ್ರೀ ಸ್ವರ್ಣನೂಪುರ ಯಕ್ಷಗಾನ ಮಂಡಳಿ, ಕುಂದಾಪುರ ಇದರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಯಕ್ಷ ಕಿನ್ನರ ಸಂಭ್ರಮ-2026 ‘ರಂಗ ತಾರ ಚಂದ್ರಮ’ ಕಾರ್ಯಕ್ರಮವು ಹಂಗಳೂರಿನ ಶ್ರೀ ಶನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಅಕ್ಟೋಬರ್ 4 ಆದಿತ್ಯವಾರ ದಂದು ಅದ್ದೂರಿಯಾಗಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸೂಪರ್ ಗ್ರೇಟ್ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಕೆ. ಆರ್. ನಾಯಕ್ ವಹಿಸಿದ್ದರು. ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ಶರತ್ ರಾಜ್ ಆರೂರು ಕಾರ್ಯಕ್ರಮ ಉದ್ಘಾಟಿಸಿದರು. ದಿಕ್ಸೂಚಿ ಭಾಷಣ ಅಬ್ದುಲ್ ರವೂಪ್ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹೆಸ್ಕುತ್ತೂರು, ಅಧ್ಯಾತ್ಮ ರಹಸ್ಯ ಮಾಸ ಪತ್ರಿಕೆ ಪ್ರಧಾನ ಸಂಪಾದಕರು ಎಸ್. ಸತೀಶ್ ಕುಮಾರ್ ಕೋಟೇಶ್ವರ, ಧರ್ಮದರ್ಶಿಗಳು ಶನೀಶ್ವರ ದೇವಸ್ಥಾನ ಹಂಗಳೂರು ಅಣ್ಣಯ್ಯ ಪೂಜಾರಿ, ಯಕ್ಷ ಪ್ರೋತ್ಸಾಹಕರು ನಾರಾಯಣ ಜಿ. ಗುನಗ, ಪಲ್ಲವಿಮಯ್ಯ ಹಾಲಾಡಿ, ಚಂದ್ರಹಾಸ ಜಿ. ಗುನಗ ವೇದಿಕೆ ಗಣ್ಯರಾಗಿ ಉಪಸ್ಥಿತರಿದ್ದರು.

ಹಾಗೂ ಸಂಸ್ಥೆಯ ವ್ಯವಸ್ಥಾಪಕರಾದ ಗಣೇಶ ಗುನಗ ಮುಖ್ಯ ಅತಿಥಿಗಳೋಪಾದಿಯಲ್ಲಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಕೃಷ್ಣಾನಂದ್ ಶೆಣೈ ಶಿರಿಯಾರ ದಂಪತಿಗಳಿಗೆ “ಗೌರವ ಸನ್ಮಾನ”, ಹಾಗೂ ಶಶಾಂಕ್ ಪಟೇಲ್ ದಂಪತಿಗಳಿಗೆ ” ಸ್ವರ್ಣ ನೂಪುರ ಪ್ರಶಸ್ತಿ ಪುರಸ್ಕಾರ” ಮತ್ತು ಶ್ರೀ ವಿಘ್ನೆ ಶ್ ದೇವಾಡಿಗ ದಂಪತಿಗಳಿಗೆ “ಗುರುವಂದನೆ” ಸಲ್ಲಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಾದ ಕು. ಸಾನ್ವಿ ಶೆಟ್ಟಿ, ಕು. ದೀಕ್ಷ ಪೂಜಾರಿ, ಕು. ವೈಷ್ಣವಿ ಶೆಟ್ಟಿ ಇವರಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ತದನಂತರ ಸ್ವರ್ಣ ನೂಪುರ ಕೇಂದ್ರದ ವಿದ್ಯಾರ್ಥಿಗಳಿಂದ “ಹರಿಚಕ್ರ ವೈಭವಂ ಹರಶಕ್ತಿ ಕಲ್ಯಾಣ0 ಎರಡು ಪೌರಾಣಿಕ ಯಕ್ಷಗಾನ ಪ್ರಸಂಗಗಳು ರಂಗಪ್ರಸ್ತುತಿಗೊಂಡವು.
ತುಳುನಾಡ ಆಚಾರ ವಿಚಾರ ಸಂಸ್ಕ್ರತಿ, ಇಲ್ಲಿನ ಗಂಡುಕಲೆಯದ ಯಕ್ಷಗಾನ ಇದರ ಕಲೆ ಕಲಾವಿದರ ಉಳಿವು ಸಂಸ್ಕೃತಿಯ ಆರಾಧನೆ, ನಮ್ಮ ನೆಲದ ಜೀವಂತ ಕಲೆ ಉಳಿವಿಗಾಗಿ, ಯಕ್ಷಗಾನದ ಸಂಪ್ರದಾಯ ಉಳಿವಿಗಾಗಿ ಆತ್ಮೀಯ ಮಿತ್ರರಾದ ಗಣೇಶ್ ಗುನಗ ಸರ್ ವ್ಯವಸ್ಥಾಪನೆಯ ಶ್ರೀ ಸ್ವರ್ಣನೂಪುರ ಯಕ್ಷಕಲಾ ಮಂಡಳಿ ತುಂಬ ಅದ್ಭುತ ಯಕ್ಷಗಾನ ಪ್ರದರ್ಶನ ನೀಡುತ್ತಾ ಬರುತ್ತಿದೆ ̤
- ಶರತ್ ರಾಜ್ ಆರೂರು, ಅಧ್ಯಕ್ಷರು
ತುಳುನಾಡ ರಕ್ಷಣಾ ವೇದಿಕೆ (ರಿ.) ಬ್ರಹ್ಮಾವರ ತಾಲೂಕು ಘಟಕ

