ಕಾಸರಗೋಡಿನಲ್ಲಿ ಆಗಸ್ಟ್ 16 ರಂದು ‘ಸ್ನೇಹ ತರಂಗ – ಪತ್ರಕರ್ತರ ಕುಟುಂಬ ಮಿಲನ’ ಸಮಾರಂಭ

0
25

​ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ) ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಪತ್ರಕರ್ತರಿಗಾಗಿ ‘ಸ್ನೇಹ ತರಂಗ – ಪತ್ರಕರ್ತರ ಕುಟುಂಬ ಮಿಲನ’ ಕಾರ್ಯಕ್ರಮವು 2026 ಆಗೋಸ್ಟ್ 16 ರಂದು ಭಾನುವಾರದಂದು ಬೆಳಿಗ್ಗೆ 9:30 ಗಂಟೆಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿಯಿರುವ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಹಾಲ್‌ನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಪತ್ರಕರ್ತರಲ್ಲಿ ವೃತ್ತಿಪರ ಬಾಂಧವ್ಯವನ್ನು ಗಟ್ಟಿಗೊಳಿಸಲು ಮತ್ತು ಕುಟುಂಬ ಸಮೇತ ಒಂದೆಡೆ ಸೇರುವ ಸದುದ್ದೇಶದಿಂದ ಈ ವಿಶಿಷ್ಟ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತರು ಹಾಗೂ ಗಣ್ಯರು ಚಾಲನೆ ನೀಡಲಿದ್ದು, ವಿವಿಧ ಕ್ಷೇತ್ರಗಳ ಪ್ರಮುಖರು ಉಪಸ್ಥಿತರಿದ್ದು ವಿಶೇಷ ಸಂದೇಶಗಳನ್ನು ನೀಡಲಿದ್ದಾರೆ.

ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ‘ಸ್ನೇಹ ಗೌರವ’ ಪ್ರದಾನ ಮಾಡಿ ಸನ್ಮಾನಿಸಲಾಗುವುದು

ಈ ಸಮಾರಂಭಕ್ಕೆ ಜಿಲ್ಲೆಯ ಎಲ್ಲಾ ಪತ್ರಕರ್ತರು ತಮ್ಮ ಕುಟುಂಬ ವರ್ಗದೊಂದಿಗೆ ಭಾಗವಹಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ಕೋರಿದ್ದಾರೆ.

-ಮಂದಾರ ರಾಜೇಶ್