ಕಾರ್ಕಳದಲ್ಲಿ ಆ.14ರಂದು ಗೀತಾಂತರಂಗ ಭಗವದ್ಗೀತೆ ಸರಣಿ ಪ್ರವಚನ

0
19

ಸೋಂದಾ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಬಿ ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನ ಕಾರ್ಕಳ ,ಅಮಿತ್ ಎಸ್ ಪೈ ಮೆಮೋರಿಯಲ್ ಸ್ವಾಮಿ ವಿವೇಕಾನಂದ ಯೋಗ ಮತ್ತು ಧ್ಯಾನ ಮಂದಿರ ಪೆರುವಾಜೆ ಇವರ ಸಹಯೋಗದಲ್ಲಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳ ತಿಂಗಳ ತಿರುಳು ಗೀತೆಯ ಅರಿವು ಸರಣಿ ಪ್ರವಚನ ಗೀತಾಂತರಂಗ ಎಂಟನೇ ಅಧ್ಯಾಯ ‘ಅಕ್ಷರ ಬ್ರಹ್ಮ ಯೋಗ’ ಅಧ್ಯಾಯದ ಪ್ರವಚನವು ಯೋಗ ದೀಪಿಕಾ ವೇದ ಪಾಠ ಶಾಲೆ ಪಲಿಮಾರು ಇದರ ಪ್ರಾಚಾರ್ಯ ಡಾ ಶಂಕರ ನಾರಾಯಣ ಭಟ್ ಕಾರ್ಕಳ ಇವರಿಂದ ಅಗಸ್ಟ್ 14 ರ ಶುಕ್ರವಾರ ಸಂಜೆ 4 30 ರಿಂದ 5.45 ಗಂಟೆವರೆಗೆ ಕಾರ್ಕಳದ ಶಾರದಾ ಮಂಜುನಾಥ ಪೈ ಹಾಲ್ ನಲ್ಲಿ ಜರುಗಲಿದೆ ಸದ್ಭಕ್ತರು ಈ ಪುನಿ ಪ್ರವಚನದಲ್ಲಿ ಭಾಗವಹಿಸುವಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಿ ಶ್ರೀ.ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನ ಕಾರ್ಕಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.