ನಂದಳಿಕೆಯ ಬೋರ್ಡ್ ಶಾಲೆಯಲ್ಲಿ ಛದ್ಮವೇಷ ಸ್ಪರ್ಧೆ

0
12

ಕಾರ್ಕಳ ತಾಲೂಕಿನ ನಂದಳಿಕೆ ಬೋರ್ಡ್ ಶಾಲೆಯಲ್ಲಿ ಈ ವರ್ಷ ಪ್ರಾರಂಭವಾದ LKG ಮತ್ತು UKG ಮಕ್ಕಳಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಛದ್ಮ ವೇಷ ಸ್ಪರ್ಧೆ ನಡೆಸಲಾಯಿತು.

ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿವಿಧ ವೇಷಗಳನ್ನು ಹಾಕಿ ಈ ಸ್ಪರ್ಧೆಗೆ ಮೆರುಗು ತಂದುಕೊಟ್ಟರು. ಪೋಷಕರು ಭಾಗವಹಿಸಿ ತಮ್ಮ ಮಕ್ಕಳ ಅಭಿನಯ ನೋಡಿ ಸಂತೋಷ ಪಟ್ಟರು.

ಈ ಶಾಲೆಯ ಮುಖ್ಯ ಶಿಕ್ಷಕರಾದ ಜೆಸಿಂತಾ LKG ಮತ್ತು UKG ಸಮಿತಿಯ ಅಧ್ಯಕ್ಷರಾದ ಸುಭಾಷ್ ಕುಮಾರ್ ನಂದಳಿಕೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಮತ, ನಿವೃತ್ತ ಶಿಕ್ಷಕರಾದ ಸದಾನಂದ ಶೆಟ್ಟಿ, ಶಿಕ್ಷಕರಾದ ಚಂದ್ರಕಾಂತ ಡೇಶಾ ಮತ್ತು ಸಿಸಿಲಿಯಾ ರೇಷ್ಮಾ ಸೌಜನ್ಯ ಉಪಸ್ಥರಿದ್ದರು. ಅನಿತಾ ಮತ್ತು ಕುಸುಮಿತಾ ಕಾರ್ಯಕ್ರಮ ನಿರೂಪಿಸಿದರು.