ವಿಶ್ವ ತುಳುವೆರ್ (ರಿ) ಮಂಗಳೂರು ವತಿಯಿಂದ ಆಟಿ ಅಮವಾಸ್ಯೆ ಆಚರಣೆ ಕಾರ್ಯಕ್ರಮ

0
15

ಜಾತಿ-ಬೇದ ಮರೆತು ಕಷಾಯ ಸ್ವೀಕರಿಸಿದ ಜನ ಸಮುದಾಯ

ವಿಶ್ವ ತುಳುವೆರ್ (ರಿ) ಮಂಗಳೂರು ವತಿಯಿಂದ ಆಟಿ ಅಮವಾಸ್ಯೆ ಆಚರಣೆ ಕಾರ್ಯಕ್ರಮ ಜಾತಿ-ಬೇದ ಮರೆತು ಕಷಾಯ ಸ್ವೀಕರಿಸಿದ ಜನ ಸಮುದಾಯ ಕಷಾಯ ಸ್ವೀಕರಿಸಿದ ತುಳುನಾಡಿಗರಲ್ಲಿ ತುಂಬ ಸಂತೋಷದ ಮೆಚ್ಚುಗೆಯ ಮಾತು, ತುಳುನಾಡಿನ ಸಂಪ್ರದಾಯಿಕ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಟಿ ಅಮವಾಸ್ಯೆ ಕಾರ್ಯಕ್ರಮ ವನ್ನು ಮಂಗಳೂರಿನ ಗಣೇಶ್ ಮಾಲ್ ಕಟ್ಟದ, ಅಮೃತ ಔಷಧಾಲಯ ಕೆ.ಎಸ್.ರಾವ್ ರಸ್ತೆಯಲ್ಲಿ ಬಹಳ ಸಡಗರದಿಂದ ಆಯೋಜಿಸಲಾಯಿತು.

ತುಳುನಾಡಿನ ಜನಜೀವನದಲ್ಲಿ ಆಟಿ ಅಮವಾಸ್ಯೆಗೆ ವಿಶೇಷವಾದ ಮಹತ್ವವಿದೇ.ಆಟಿ ತಿಂಗಳಲ್ಲಿ ಆಚರಿಸಲಾಗುವ ಈ ಅಮವಾಸ್ಯೆಯು ನಮ್ಮ ಪೂರ್ವಜರ ಸಂಪ್ರದಾಯ ಪ್ರಕೃತಿಯೊಂದಿಗೆ ಹೊಂದಿಕೊಂಡ ಜೀವನ ಶೈಲಿ ಹಾಗೂ ಆರೋಗ್ಯಪರ ಆಚರಣೆಗಳನ್ನ ನೆನೆಪಿಸುವ ಪ್ರಮುಖ ಹಬ್ಬವಾಗಿದೆ. ಈ ದಿನದಂದು ತುಳುನಾಡಿನ ಮನೆಗಳಲ್ಲಿ ಆಟಿ ಕಷಾಯ ಮತ್ತು ಮೆಂತೆ ಗಂಜಿ ಸೇವಿಸುವ ಸಂಪ್ರದಾಯವು ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಶವಂತ ಮೆಂಡನ್ ಬೋಳೂರು, ಮುಖಂಡರು ಹಾಗೂ ಮಾಜಿ ದರ್ಮದರ್ಶಿಗಳು ಉರ್ವ ಮಾರಿಗುಡಿ, ದಯಾನಂದ ಸ್ಥಾಪಕಾದ್ಯಕ್ಷರು,ವಿಶ್ವ ತುಳುವೆರ್, Ln ಡಾ| ಗಣೇಶ್ ಕುಮಾರ್, ಉಪಾದ್ಯಕ್ಷರು ವಿಶ್ವ ತುಳುವೆರ್, ಪ್ರಕಾಶ್ ಸಿಪೋನಿ, ಅದ್ಯಕ್ಷರು ವಿಶ್ವ ತುಳುವೆರ್ ದಕ್ಷಿಣ ಕನ್ನಡ ಜಿಲ್ಲೆ, ಶಶಿಕಲಾ ಮಹಿಳಾ ಕಾರ್ಯದ್ಯಕ್ಷರು ವಿಶ್ವ ತುಳುವೆರ್ ದಕ್ಷಿಣ ಕನ್ನಡ ಜಿಲ್ಲೆ,ಗಣೇಶ್ ಬಲ್ಲಾಳ್ ಭಾಗ್ ಹಿರಿಯ ಸದಸ್ಯರು ವಿ.ಟಿ., ಪಾರ್ಶ್ವನಾಥ ಜೈನ್.ಜಂಟಿ ಕಾರ್ಯದರ್ಶಿ ವಿ.ಟಿ, ಕುಮಾರಿ ಶ್ವೇತಾ ಕೋಶಾಧಿಕಾರಿ ವಿ.ಟಿ. ವಿಜಯ ಪ್ರಭು, ಸದಸ್ಯರು ವಿ.ಟಿ., ಡಿ.ಟಿ ಪ್ರಮೋದ್ ದೇವಾಡಿಗ, ಉಪಾದ್ಯಕ್ಷರು ವಿ.ಟಿ. ಮಂಗಳೂರು ತಾಲೂಕು, ಹೇಮಲತಾ ಕಾರ್ಯಾದ್ಯಕ್ಷರು ವಿ.ಟಿ. ತೊಕೊಟ್ಟು, ಸದಾನಂದ ಕೆ ಎಂ ಸಿ, ಸದಸ್ಯರು ವಿ.ಟಿ ಮಂಗಳೂರು ತಾಲ್ಲೂಕು. ಹಾಗೂ ಇತರ ಪದಾದಿಕಾರಿ -ಸದಸ್ಯರು ಉಪಸ್ಥಿತಿ ಇದ್ದರು.