ಕೂಡ್ಲಿನಲ್ಲಿ ಆ.18ರಂದು ‘ರಜತ ರಂಗ’ 20ನೇ ಕಾರ್ಯಕ್ರಮ

0
8

ಕಾಸರಗೋಡು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ (ರಿ.), ಕೂಡ್ಲು ವತಿಯಿಂದ ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ‘ರಜತ ರಂಗ’ 20ನೇ ಕಾರ್ಯಕ್ರಮ ಹಾಗೂ ಸಂಸ್ಮರಣೆ ಆಯೋಜಿಸಲಾಗಿದೆ.

ಕಾರ್ಯಕ್ರಮವು ಆಗಸ್ಟ್ 18, 2026ರ ಮಂಗಳವಾರ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಕೂಡ್ಲು ಗೋಪಾಲಕೃಷ್ಣ ಶ್ಯಾನುಭೋಗ್ ಅವರ ಸಂಸ್ಮರಣೆ ನಡೆಯಲಿದ್ದು, ರಾಜೇಂದ್ರ ಬಜಕೂಡ್ಲು ಅವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಕೆ.ಜಿ. ಶ್ಯಾನುಭೋಗ್, ಡಾ. ಹರಿಕಿರಣ ಬಂಗೇರ, ವಿಷ್ಣು ಶ್ಯಾನುಭೋಗ್, ವೇ.ಮೂ. ಹರಿನಾರಾಯಣ ಮಯ್ಯ ಹಾಗೂ ಗ್ರಾಮ ಪಂಚಾಯತ್ ಸದಸ್ಯೆ ವಸಂತಿ ಉಪಸ್ಥಿತರಿರಲಿದ್ದಾರೆ.

ಯಕ್ಷಗಾನ ತಾಳಮದ್ದಳೆ

ಕಾರ್ಯಕ್ರಮದ ಅಂಗವಾಗಿ ‘ತ್ರಿಶಂಕು ಸ್ವರ್ಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ್ ಮಯ್ಯ ಕೂಡ್ಲು, ಚೆಂಡೆ-ಮದ್ದಳೆಯಲ್ಲಿ ಮಧ್ವರಾಜ ಅಡಿಗ ಹಾಗೂ ಕಿಶನ್ ಅಗ್ಗಿತ್ತಾಯ, ಚಕ್ರತಾಳದಲ್ಲಿ ಅರ್ಜುನ್ ಕೂಡ್ಲು ಭಾಗವಹಿಸಲಿದ್ದಾರೆ.

ಮುಮ್ಮೇಳದಲ್ಲಿ ವೇ.ಮೂ. ಹರಿನಾರಾಯಣ ಮಯ್ಯ, ಗೋಪಾಲ ನಾಯಕ್ ಸೂರಂಬೈಲ್, ಗುರುರಾಜ ಹೊಳ್ಳ ಬಾಯಾರು ಹಾಗೂ ನವೀನ ಚಂದ್ರ ಶರ್ಮ ಕಲಾ ಪ್ರದರ್ಶನ ನೀಡಲಿದ್ದಾರೆ.

ಕಾರ್ಯಕ್ರಮಕ್ಕೆ ಕಲಾವಿದ ಕೂಡ್ಲು ಗೋಪಾಲಕೃಷ್ಣ ಶ್ಯಾನುಭೋಗ್ ಮೆಮೋರಿಯಲ್ ಟ್ರಸ್ಟ್, ವಿಷ್ಣುಮಂಗಲ, ಕೂಡ್ಲು ಪ್ರಾಯೋಜಕರಾಗಿದ್ದಾರೆ.

ಯಕ್ಷಗಾನ ಕಲೆಯ ಆಸಕ್ತರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಸರ್ವರಿಗೂ ಹಾರ್ದಿಕ ಸ್ವಾಗತ ಕೋರಿದ್ದಾರೆ.