ಉಡುಪಿ ಜಿಲ್ಲೆಯಲ್ಲಿ ಹಿಂದೂಗಳ ಧ್ವನಿ ಅಡಗಿಸುವ ಪ್ರಯತ್ನ ಖಂಡನೀಯ : ರಮಿತಾ ಸೂರ್ಯವಂಶಿ

0
46

ಉಡುಪಿ : ಹಿಂದೂ ಸಂಘಟನೆಯ ವತಿಯಿಂದ ನಡೆಯುವ ಅಖಂಡ ಭಾರತ ಪಂಜಿನ ಮೆರವಣಿಗೆ ಕಾರ್ಯಕ್ರಮಕ್ಕೆ ಪ್ರಮುಖ ಭಾಷಣಕಾರರಾಗಿ ಬರಬೇಕಾಗಿದ್ದ ಬಜರಂಗದಳದ ಮುಖಂಡ ಪುನೀತ್ ಅತ್ತಾವರ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡ ನರಸಿಂಹ ಮಾಣಿ ಅವರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿರುವ ಜಿಲ್ಲಾಡಳಿತದ ನಡೆ ತೀವ್ರ ಖಂಡನೀಯ.

ರಾಜ್ಯ ಸರ್ಕಾರವು ಜಿಲ್ಲಾಡಳಿತವನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು, ತನ್ನ ಹಿಂದೂ ವಿರೋಧಿ ನೀತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತಿದೆ. ಸರ್ಕಾರವು ಪದೇ ಪದೇ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದು, ಇಂತಹ ದುಷ್ಟ ಯತ್ನಗಳನ್ನು ಕೈಬಿಟ್ಟು, ಈ ತಕ್ಷಣವೇ ಪ್ರವೇಶ ನಿರ್ಬಂಧದ ಆದೇಶವನ್ನು ಹಿಂಪಡೆಯಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ.

ಇಲ್ಲ ವಾದಲ್ಲಿ ಮುಂದೆ ಹಿಂದೂ ಬಲವನ್ನು ನೋಡಬೇಕಾದಿತು, ಯಾರನ್ನೋ ಮೆಚ್ಚಿಸುವ ಬರದಲ್ಲಿ ತಮ್ಮ ಹಳ್ಳವನ್ನು ತಾವೇ ತೋಡಿಕೊಳ್ಳುತ್ತಿದ್ದು ಮುಂದೆ ಪಚ್ಛತಾಪ ಪಡಬೇಕಾದಿತು, ಹಾಗಾಗಿ ಹಿಂದೂಗಳ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಬೇಡಿ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರು ಪತ್ರಿಕಾ ಪ್ರಕಟಣೆ ನೀಡಿರುತಾರೆ.