ಕೊಂಕಣಿ ಮಾನ್ಯತಾ ದಿವಸ ಆಚರಣೆ

0
4

ಕೊಂಕಣಿಯನ್ನು ರಾಜ ಭಾಷೆಯನ್ನಾಗಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ 1992 ಆಗಸ್ಟ್ 20ರಂದು ಸೇರಿಸಿತು. ದೇವನಾಗರಿ ಲಿಪಿಯಲ್ಲಿ ಬರೆಯುವ ಕೊಂಕಣಿ ಭಾಷೆಯ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಏರ್ಪಡಿಸಲಾಗಿದೆ. ಆರರಿಂದ ಹತ್ತು ತರಗತಿಯ ವಿದ್ಯಾರ್ಥಿಗಳ 10 ತಂಡಗಳನ್ನು ಆಹ್ವಾನಿಸಿ ಮೂರು ನಗದು ಪುರಸ್ಕಾರಗಳನ್ನು ನೀಡಲಾಗುವುದು. ಕಾರ್ಕಳ ಎಸ್ವಿಟಿ ತಲೆಯಲ್ಲಿ ದ್ವಿತೀಯ ಭಾಷೆ ಕೊಂಕಣಿಯಲ್ಲಿ ಕಲಿತು ನೂರಕ್ಕೆ ನೂರು ಅಂಕ ಪಡೆದ ಕೌಸಲ್ಯ ಳಿಗೆ ರೂ. 5000 ನಗದು ನೀಡಲಾಗುವುದು.

ಡಾ ಟಿ ಎಂ ಎ ಪೈ ಪ್ರತಿಷ್ಠಾನದ 2024ರ ಉತ್ತಮ ಕೊಂಕಣಿ ಪುಸ್ತಕ ಬಹುಮಾನ ಪಡೆದ ಗೋವಾದ ಕೊಂಕಣಿ ಲೇಖಕ ಅನಂತ ಅಗ್ನಿ ಹಾಗೂ ನವದೆಹಲಿಯ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹೆಗಾರ, ಪುಸ್ತಕ ಪುರಸ್ಕಾರ ವಿಜೇತ ಮೇಲ್ವಿನ್ ರೊಡ್ರಿಗಸ್ ಅವರನ್ನು ಪುರಸ್ಕರಿಸಲಾಗುವುದು. ಸುಮಾರು 40 ಸಾವಿರ ವಿದ್ಯಾರ್ಥಿಗಳು ಕೊಂಕಣಿಯನ್ನು ಕಲಿಯುತ್ತಿದ್ದು ಕಲಿಸುತ್ತಿರುವ ಶಿಕ್ಷಕರಿಗೆ ಗೌರವ ಧನವನ್ನು ಕೊಂಕಣಿ ಕೇಂದ್ರದಿಂದ ನೀಡಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳೂರಿನ ಕೊಂಕಣಿ ಭಾಷಾ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಖಜಾಂಚಿ ಬಿ ಆರ್ ಭಟ್ಟ, ಗೌರವ ಕಾರ್ಯದರ್ಶಿ ಡಾ ಕಸ್ತೂರಿ ಮೋಹನ್ ಪೈ, ಉಪಾಧ್ಯಕ್ಷ ವಿಲಿಯಂ ಡಿಸೋಜ, ರಮೇಶ್ ನಾಯಕ್, ಎಂ ಆರ್ ಕಾಮತ್ ಹಾಗೂ ಇತರರು ಪ್ರಕಟಿಸಿದರು.

ವರದಿ ರಾಯಿ ರಾಜ ಕುಮಾರ್