ಹೊಸಂಗಡಿ ಮಾರೂರು ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ಜೀರ್ಣೋದ್ಧಾರಕ್ಕೆಸಹಾಯ

0
5

ಮೂಡುಬಿದಿರೆ : ತಾಲೂಕಿನ ಶ್ರೀ ಗೋಪಾಲ ಕೃಷ್ಣ ಕೊಡಾಮಣಿತ್ತಾಯ ದೇವಸ್ಥಾನ ಮಾರೂರು – ಹೊಸಂಗಡಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪೂಜ್ಯ ಡಾ/ ಡಿ ವೀರೇಂದ್ರ ಹೆಗ್ಗಡೆಯವವರು ಮಂಜೂರು ಮಾಡಿರುವ ರೂಪಾಯಿ 5 ಲಕ್ಷದ ಅನುದಾನದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ . ಡಿ ರವರು ದೇವಸ್ಥಾನದ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ದೇವಾ ಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ ಶ್ರೀಪತಿ ಭಟ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಶಂಭು ಏನ್ ಶೆಟ್ಟಿ ಮಾರೂರು ಗುತ್ತು, ಅಧ್ಯಕ್ಷರು ವ್ಯವಸ್ಥಾಪನ ಸಮಿತಿ, ವೆಂಕಟರಾಜು, ಅರ್ಚಕರು, ಯೋಜನಾಧಿಕಾರಿ ಧನಂಜಯ, ಮೇಲ್ವಿಚಾರಕಿ ಸರಸ್ವತಿ, ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ವಲಯ ಅಧ್ಯಕ್ಷ ಅರುಣ್, ಸೇವಾಪ್ರತಿನಿಧಿ ಸೌಮ್ಯ, ಜಗದೀಶ್ ಆಚಾರ್ಯ, ದಿನೇಶ್ ಮಾರೂರು, ಕೇಶವ ಆಚಾರ್ಯ ದೇವಸ್ಥಾನದ ಸಮಿತಿ ಯ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.