ಮಂಗಳೂರಿನಲ್ಲಿ ಆ.16, 17, 18ರಂದು ಪುಸ್ತಕ ಹಬ್ಬ 2026

0
7

ಮಂಗಳೂರಿನ ಸಾಹಿತ್ಯ ಕೇಂದ್ರದ ವತಿಯಿಂದ ಪುಸ್ತಕ ಹಬ್ಬ 2026 ಆಗಸ್ಟ್ 16 ರಿಂದ 18ರ ತನಕ ಸಂಘ ನಿಕೇತನದ ಸಭಾಂಗಣದಲ್ಲಿ ಆಯೋಜನೆಗೊಂಡಿದೆ. ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವುದು, ಯುವಜನರಲ್ಲಿ ಸಾಹಿತ್ಯ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಅಗಸ್ಟ್ 16ರಂದು ಬೆಳಗ್ಗೆ ಉದ್ಘಾಟನೆ, ಮಧ್ಯಾಹ್ನ ಬಹುಭಾಷಾ ಕವಿಗೋಷ್ಠಿ, ಶಾಸ್ತ್ರೀಯ ಸಂಗೀತ, ಸಂಸ್ಕೃತಿಕ ವೈಭವ, ನಾಟಕ ಪ್ರದರ್ಶನ ನಡೆಯಲಿದೆ. 17ರಂದು ಅಜ್ಜಿ ಕಥೆಗಳು, ಯಕ್ಷಗಾನ ಪ್ರದರ್ಶನ, ಸಂಜೆ ಯಕ್ಷಗಾನ ತಾಳಮದ್ದಾಳೆ ನಡೆದಿದೆ.

18ರಂದು ಬೆಳಗ್ಗೆ ಸಾಹಿತ್ಯ ಕಥನ ವಿಚಾರಗೋಷ್ಠಿ, ತುಳು ಕಾವ್ಯ ಸಾಹಿತ್ಯ ಕುರಿತು ವಿಚಾರ ಮಂಡನೆ. ಮಧ್ಯಾಹ್ನ ಮೊಬೈಲ್ ಯುಗದಲ್ಲಿ ಪುಸ್ತಕ ಬಗ್ಗೆ ವಿದ್ಯಾರ್ಥಿ ಗೋಷ್ಠಿ. ಸಂಜೆ ಮಾರಿಕಾಡು ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಪುಸ್ತಕ ಹಬ್ಬದಲ್ಲಿ ಪ್ರದರ್ಶನ, ಮಾರಾಟ, ಪ್ರಸಿದ್ಧ ಕವಿಗಳು ಹಾಗೂ ಖ್ಯಾತ ಬರಹಗಾರರನ್ನು ಭೇಟಿ ಮಾಡುವ ಅವಕಾಶವಿದ್ದು ಸಾಕಷ್ಟು ವೇದಿಕೆಯನ್ನು ಮಕ್ಕಳ ಪ್ರತಿಭೆಗೆ ಒದಗಿಸಿಕೊಡಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಸಾಹಿತ್ಯ ಕೇಂದ್ರದ ಪ್ರಕಾಶ್ ಪೈ, ಅರವಿಂದ ಬಿಜೂರು, ಗಜಾನನ ಪೈ, ಕೆ ರತ್ನಾಕರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್