ಅಳಿಕೆ: ಮುಳಿಯ ಅಂಗನವಾಡಿ ಕೇಂದ್ರಕ್ಕೆ ಧ್ವಜಸ್ತಂಭ ಕೊಡುಗೆ

0
21

ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಅಂಗನವಾಡಿ ಕೇಂದ್ರಕ್ಕೆ ನೂತನವಾಗಿ ಧ್ವಜ ಸ್ಥoಭವನ್ನು ಅಳಿಕೆ ಸಣ್ಣಗುತ್ತು ಶ್ರೀಯುತ ದಿ. ಚೆನ್ನಪ್ಪ ಪೂಜಾರಿ ಹಾಗೂ ಧರ್ಮಪತ್ನಿ ಶಿವಮ್ಮ ಇವರ ಸ್ಮರಣಾರ್ಥವಾಗಿ ಇವರ ಮಗನಾದ ಶ್ರೀಯುತ ಬಾಲಕೃಷ್ಣ ಪೂಜಾರಿಯವರು ನಿರ್ಮಿಸಿ ಕೊಟ್ಟಿರುವರು. ಇದರ ಉದ್ಘಾಟನೆಯನ್ನು ಅಳಿಕೆ ಗ್ರಾಮಪಂಚಾಯತ್ ಮಾಜಿ ಸದಸ್ಯರಾದ ಜಗಧೀಶ್ ಶೆಟ್ಟಿ ಮುಳಿಯ ಮತ್ತು ಸಣ್ಣಗುತ್ತು ಬಾಲಕೃಷ್ಣ ಪೂಜಾರಿಯವರು ನೆರವೇರಿಸಿದರು.
ಧ್ವಜಾರೋಹಣವನ್ನು ಅಳಿಕೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಯುತ ಪದ್ಮನಾಭ ಪೂಜಾರಿ ಸಣ್ಣಗುತ್ತು ಇವರು ನೆರವೇರಿಸಿದರು. ಹಾಗೆಯೇ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಮತ್ತು ಇಲಾಖಾ ವತಿಯಿಂದ ಶ್ರೀಯುತ ಬಾಲಕೃಷ್ಣ ಪೂಜಾರಿ ದಂಪತಿಯವರನ್ನು ಸ್ಮರಣಿಕೆ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನೋಣಯ್ಯ ಪೂಜಾರಿ ಮತ್ತು ಶ್ರೀಮತಿ ವೇಧಾವತಿ ಸಣ್ಣಗುತ್ತು, ವಿಶ್ವಕಿರಣ್ ಸಣ್ಣಗುತ್ತು, ಅಳಿಕೆ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಯುತ ಸುಕುಮಾರ, ಆನಂದ ಶೆಟ್ಟಿ ಮುಳಿಯ, ವೆಂಕಟಕೃಷ್ಣ ಶರ್ಮ ಮುಳಿಯ, ಬಲವಿಕಾಸ ಸಮಿತಿ ಸದಸ್ಯರು, ಸ್ತ್ರೀ ಶಕ್ತಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಮತ್ತು ಪುಟಾಣಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸ್ಥಳೀಯರಿಂದ ಸಿಹಿ ತಿಂಡಿ ಹಂಚಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಭುವನೇಶ್ವರಿ ಧನ್ಯವಾದ ಅರ್ಪಿಸಿದರು.