ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ನಗರದ ಎಂ.ಸಿ.ಸಿ. ‘ಎ’ ಬ್ಲಾಕ್ ಶಾಖೆಯಿಂದ ಆಗಸ್ಟ್ 21 ರಂದು ಶ್ರಾವಣ ಶುಕ್ರವಾರ ಸಂಜೆ 4 ಗಂಟೆಗೆ ಎಂ.ಸಿ.ಸಿ. ‘ಎ’ ಬ್ಲಾಕ್‌ನಲ್ಲಿರುವ ಶ್ರೇಯಸ್ ನಿಲಯದ ಸಭಾಂಗಣದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಹಮ್ಮಿಕೊಳ್ಳ ಲಾಗಿದೆ ಎಂದು ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪ್ರಭಾ ರವೀಂದ್ರ ತಿಳಿಸಿದ್ದಾರೆ.
ಈ ಆಧ್ಯಾತ್ಮಿಕ ಪರಂಪರೆಯ ಪೂಜೆಯಲ್ಲಿ ಭಕ್ತಿಗೀತೆ, ಶ್ರೀಲಕ್ಷ್ಮೀ ಅಷ್ಟೋತ್ತರ, ಮುತ್ತೈದೆಯರಿಗೆ ಉಡಿ ತುಂಬುವುದು ಮುಂತಾದ ಚಟುವಟಿಕೆ ಗಳು ನಡೆಯುತ್ತಿದೆ. ಈ ಪವಿತ್ರವಾದ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಭಾಗವಹಿಸುವ ಮುತ್ತೈದೆಯರು ಭಕ್ತಿಗೀತೆ ಹಾಡುಗಾರರು ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ ವಿನಂತಿಸಿದ್ದಾರೆ. ಸಂಪರ್ಕಿಸುವ ಸನೀಹವಾಣಿ
9964073817

