ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ ಕಾರ್ಯಕ್ರಮ ಯಶಸ್ವಿ

0
6

ಅಲಯನ್ಸ್ ಕ್ಲಬ್ ಮಂಗಳೂರು, ವಿಶ್ವ ತುಳುವೆರೆಂಕುಲು ಕುಡ್ಲ, ಪ್ರತಿಭಾ ಕಣ್ಣಿನ ಆಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರವು ಆಗಸ್ಟ್ 15. 80ನೇ ವರುಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರವು ಪ್ರತಿಭಾ ಕಣ್ಣಿನ ಆಸ್ಪತ್ರೆ, ಮಂಗಳೂರು ನಡೆಯಿತು.

ಕಾರ್ಯಕ್ರಮವನ್ನು ಪ್ರತಿಭಾ ಕಣ್ಣಿನ ಆಸ್ಪತ್ರೆ ಮಂಗಳೂರು ವ್ಯವಸ್ಥಾಪಕ ನಿರ್ದೇಶಕರಾದ ರೂಪಾ ಭಟ್ ದ್ವೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಾ ಮೇಧಾ ಭಟ್,ಡಾ ಕವಿತಾ ಕಿರಣ್, ಅಲಯನ್ಸ್ ಕ್ಲಬ್ ಮಂಗಳೂರು ಸಾರ್ವಜನಿಕ ನಿರ್ದೇಶಕರಾದ ಸಂತೋಷ್ ಆಳ್ವ, ಮುಂತಾದವರು ಉಪಸ್ಥಿತರಿದ್ದರು. ಅಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಜಿ ಕೆ ಹರಿಪ್ರಸಾದ ರೈ ಕಾರಮೊಗರು, ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು ಅಲಯನ್ಸ್ ಕ್ಲಬ್ ಮಂಗಳೂರು ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಧನ್ಯವಾದ ಗೈದರು.