ಸಜೀಪ ಮೂಡದಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಸುಭಾಷ್ ಯುವಕ ಮಂಡಲದಿಂದ ಸಂಭ್ರಮಾಚರಣೆ

0
40

ಸುಭಾಷ್ ಯುವಕ ಮಂಡಲ ಸಜೀಪ ಮೂಡ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ ನೆರವೇರಿಸಿದರು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೇಶದ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ನಾವು ಉಳಿಸಿ ಬೆಳೆಸಿ ದೇಶಾಭಿಮಾನವನ್ನು ಬೆಳೆಸುವುದರ ಮೂಲಕ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದರ ಮೂಲಕ ದೇಶದ ಋಣವನ್ನು ತೀರಿಸಬೇಕಾಗಿದೆ ಎಂದರು ಶಾರದಾ ಪೂಜಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ, ಬೆಂಕ್ಯ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಶರೀಫ್, ಎಸ್ಎಂ ಇಸ್ಮಾಯಿಲ್, ಪಂಚಾಯಿತಿ ಸದಸ್ಯ ಯೋಗೀಶ್ ಬೆಲ್ಚಡ ಚೆನ್ನಪ್ಪ ಪೂಜಾರಿ ವಿಶ್ವನಾಥ ಕೊಟ್ಟಾರಿ ನಿತಿನ್ ಅರಸ ಕಿಶೋರ್ ಪೂಜಾರಿಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು