ಕುತ್ತಾರು : ಶೃತಿಲಯ ಕಲಾ ಕೇಂದ್ರ ಕುುತ್ತಾರು ಹಾಗೂ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಸಮಿತಿಯ ಆಶ್ರಯದಲ್ಲಿ 4ನೇ ವರ್ಷದ ‘ಕುುತ್ತಾರು ಮುದ್ದು ಕೃಷ್ಣ-2026’ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು ಮುಂಬರುವ ಆಗಸ್ಟ್ 30, 2026 ರ ರವಿವಾರ ಕುುತ್ತಾರಿನ ಶ್ರೀ ರಾಜರಾಜೇಶ್ವರಿ ಸಿದ್ಧಿ ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆಯಿಂದ ಭಜನಾ ಸಂಕೀರ್ತನೆ, ದೇವರಿಗೆ ಪೂಜೆ ಹಾಗೂ ಮಕ್ಕಳಿಗಾಗಿ ವಿವಿಧ ವಯೋಮಿತಿಯ ಕೃಷ್ಣವೇಷ ಮತ್ತು ನೃತ್ಯ ಸ್ಪರ್ಧೆಗಳು ಜರುಗಲಿವೆ.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ‘ಶೃತಿಲಯ ಸಾಧಕ ಪ್ರಶಸ್ತಿ’ ಪ್ರದಾನ ಹಾಗೂ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷರಾದ ರವಿ ರೈ ಫಜೆರು ಹಾಗೂ ನಿರ್ದೇಶಕರಾದ ಭಾಸ್ಕರ್ ರಾವ್ ಕುುತ್ತಾರು ಕೋರಿದ್ದಾರೆ.
ವರದಿ -ಮಂದಾರ ರಾಜೇಶ್

