ಶಿವಮೊಗ್ಗ ದಲ್ಲಿ 20 ರಂದು ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ್ ಅರಸು ಜನ್ಮದಿನಾಚರಣೆ ಆಚರಣೆ

0
10

ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ಅವರ ಜನ್ಮದಿನಾಚರಣೆಯನ್ನು

20.08.2026 ರಂದು ಬೆಳಿಗ್ಗೆ 10.3ಕ್ಕೆ ಆಚರಿಸಲಾಗುವುದು. ಇಂದು ರಮೇಶ್ ಶಂಕರಘಟ್ಟ ಪತ್ರಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಲಿದ್ದು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ, ವಿಭಾಗದ ಅಧ್ಯಕ್ಷರಾದ ಎಂ. ರಮೇಶ್ ಶಂಕರಘಟ್ಟ ಕಾರ್ಯಕ್ರಮದ ವಿವರ ನೀಡಿದರು.

ಪ್ರಮುಖ ಮುಖಂಡರ ಭಾಗಿ:-

​ಶಾಸಕರು ಹಾಗೂ 2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳು, ​ಕೆಪಿಸಿಸಿ ಪದಾಧಿಕಾರಿಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು,
ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಪಕ್ಷದ ಕಾರ್ಯಕರ್ತರು,
ಈ ವಿಶೇಷ ಸಮಾರಂಭದಲ್ಲಿ ಆಗಮಿಸಿ ಗಣ್ಯರು ಮತ್ತು ಮುಖಂಡರು ದಿವಂಗತ ನಾಯಕದ್ವಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ, ದೇಶ ಹಾಗೂ ರಾಜ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿ ಗೌರವ ಸಲ್ಲಿಸಲಿದ್ದಾರೆ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ.

ವರದಿ : ಮಂದಾರ ರಾಜೇಶ್