ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಮುಡಿಪು ವಲಯದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿ ಮೂರು ತಿಂಗಳ ಹೊಲಿಗೆ ತರಬೇತಿಯನ್ನು ಪ್ರಾರಂಭಿಸಲಾಯಿತು.
ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಆಗಸ್ಟ್ 19 ಬುಧವಾರ ವಿಶ್ವಕರ್ಮ ಸಭಾಭವನ ಮುಡಿಪು ಇಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಮಹಿಳೆಯರು ಸ್ವ-ಉದ್ಯೋಗ ಮಾಡಿ ಸ್ವಾವಲಂಬಿಗಳಾಗಬೇಕೆಂಬುದು ಪೂಜ್ಯ ಹೇಮಾವತಿ ವೀರೇಂದ್ರ ಹೆಗ್ಡೆಯವರ ಕನಸಾಗಿದ್ದು ಈ ಉದ್ದೇಶವನ್ನು ಇಟ್ಟುಕ್ಕೊಂಡು ಉಚಿತ ಹೊಲಿಗೆ ತರಬೇತಿ ನಡೆಸಲಾಗುತ್ತದೆ. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿ ಯೋಜನೆಯ ಮೂಲಕ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಭಾರತೀ ಶಾಲೆ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಹಿಸಿ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು 3 ತಿಂಗಳ ಉಚಿತ ತರಬೇತಿ ಉತ್ತಮವಾಗಿ ಪಡೆದುಕೊಳ್ಳಿ ಎಂದರು ಕಾರ್ಯಕ್ರಮದಲ್ಲಿ ವಿಶ್ವಕರ್ಮ ಬ್ಯಾಂಕ್ ಮೆನೆಜರ್ ಪ್ರಸಾದ್, ಸಿಂಧೂರ ಮಾತೃ ಮಂಡಳಿ ಗೌರವಧ್ಯಕ್ಷೆ ಶಶಿಕಲಾ, ಹೊಲಿಗೆ ಶಿಕ್ಷಕಿ ರೇಣುಕಾರವರು ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಧಿಕಾರಿ ದೀಪ ಸ್ವಾಗತಿಸಿ,ಸೇವಾಪ್ರತಿನಿಧಿ ಶಕೀಲಾ ವಂದಿಸಿದರು, ವಲಯ ಮೇಲ್ವಿಚಾರಕಿ ಪ್ರೇಮಲತ ಕಾರ್ಯಕ್ರಮ ನಿರೂಪಿಸಿದರು.

