ಎಂ ಎಸ್ ಎಂ ಇ ಮತ್ತು ಸ್ಟಾರ್ಟ್ ಅಪ್ ಕಾನ್ ಕ್ಲೇವ್ 2026

0
7

ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಮತ್ತು ರೋಟರಿ ಕ್ಲಬ್ ಜಂಟಿಯಾಗಿ ಆಗಸ್ಟ್ 21ರಂದು ಮಂಗಳೂರಿನ ಓಲ್ಡ್ ಪೋರ್ಟ್ ರಸ್ತೆ ಯ ತಾಜ್ ವಿವಾಂತ ಹೋಟೆಲ್ ಎದುರಿನ ರೆಡ್ ಕ್ರಾಸ್ ಪ್ರೇರಣಾ ಸಭಾಂಗಣದಲ್ಲಿ ಒಂದು ದಿನದ ಎಂಎಸ್ಎಂಇ ಮತ್ತು ಸ್ಟಾರ್ಟ್ ಅಪ್ ಕಾಂಕ್ಲೇವ್ 2026 ನಡೆಯಲಿದೆ.

ತಂತ್ರಜ್ಞಾನ ವಲಯ, ವ್ಯಾಪಾರ, ಇ ವಾಣಿಜ್ಯ, ಪ್ರವಾಸೋದ್ಯಮ, ಉತ್ಪಾದನೆ, ಸೇವೆಗಳು ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನವೋದ್ಯಮಗಳನ್ನು ಉತ್ತೇಜಿಸಲು ಆಸಕ್ತ ಉದ್ಯಮಿಗಳು, ಹೂಡಿಕೆದಾರರು, ಕೈಗಾರಿಕಾ ಮುಖಂಡರು, ನೀತಿ ನಿರೂಪಕರು, ಇತರ ಎಲ್ಲಾ ಪಾಲುದಾದರನ್ನು ಒಟ್ಟುಗೂಡಿಸುವ ಒಂದು ದಿನದ ಸಮಾವೇಶ. ಹೆಚ್ಚಿನ ಎಲ್ಲಾ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳು ಸಕ್ರಿಯ ಪ್ರಯೋಜಕತ್ವವನ್ನು ವಹಿಸಿಕೊಂಡಿವೆ.

ವಿವಿಧ ಕಂಪನಿಗಳು ಕೂಡ ಸಹ ಪ್ರಾಯೋಜಕತ್ವವನ್ನು ಹೊಂದಿವೆ. ಎಲ್ಲರೂ ನೋಂದಣಿ ಎಂದಿಗೆ ಭಾಗವಹಿಸಲು ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸಿ ಎ ಎಸ್ ಎಸ್ ನಾಯಕ್, ಕಾರ್ಯದರ್ಶಿ ಡಾ ಪಿ ಜಿ ಮಹೇಶ್, ರೋಟರಿಯ ರವೀಂದ್ರ ಬಿ ಎನ್, ಜಾಕ್ಸನ್ ಸಲ್ದಾನ, ಡ್ಯಾರಿಲ್ ಡಿಸೋಜ, ದೇವದಾಸ್ ರೈ, ಸತೀಶ್ ಮಾಬೆನ್ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್