ಇ ವಿ ಆಟೋಗಳ ಪರ್ಮಿಟ್ ಹಾಗೂ ವಲಯ ವಿಂಗಡಣೆ ಸಮಸ್ಯೆ

0
9

ದ ಕ ಜಿಲ್ಲಾ ಟೀಮ್ ಗ್ರೀನ್ ಸಿಟಿ ಸಮಿತಿಯು ಇ.ವಿ.ಆಟೋಗಳ ಪರ್ಮಿಟ್ ಹಾಗೂ ವಲಯ ವಿಂಗಡಣೆಯ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳನ್ನು ಕೇಳಿಕೊಂಡರು. 2024ರ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಎಲ್ಲಾ ಪ್ರಕಾರದ ಆಟೋಗಳಿಗೆ ನಗರದಾದ್ಯಂತ ಮುಕ್ತವಾಗಿ ಸಂಚರಿಸಲು ಅನುಮತಿಯನ್ನು ನೀಡಿದ್ದರು. ಆದರೆ ಈಗಿನ ಜಿಲ್ಲಾಧಿಕಾರಿಗಳು ಈ ಆದೇಶವನ್ನು ರದ್ದುಪಡಿಸಿ ಕೇವಲ 2025 ಅಕ್ಟೋಬರ್ 30ರ ಮೊದಲು ಮಾರ್ಗಕ್ಕೆ ಬಂದ ಆಟೋಗಳಿಗೆ ಮಾತ್ರ ಸಂಚರಿಸಲು ಅವಕಾಶವನ್ನು ನೀಡಿರುತ್ತಾರೆ. ಎಂದರೆ ಜಿಲ್ಲಾಧಿಕಾರಿಗಳು ಬದಲಾದ ಕೂಡಲೇ ಆದೇಶಗಳು ಬದಲಾಗುತ್ತವೆಯೇ ಎಂದು ರಿಕ್ಷಾ ಚಾಲಕರು ಪ್ರಶ್ನಿಸಿದ್ದಾರೆ.

ಈ ರೀತಿಯ ಪರಿಸ್ಥಿತಿಯಲ್ಲಿ ಚಾಲಕರು ಕುಟುಂಬವನ್ನು ನಿಭಾಯಿಸುವುದು ಹೇಗೆ? ಲೋನ್ ಪಡೆದು ವಾಹನವನ್ನು ಓಡಿಸುತ್ತಿರುವವರ ಪರಿಸ್ಥಿತಿ ಏನು? ಇತ್ತೀಚಿಗೆ ನಗರ ವಿಳಾಸ ಇದ್ದು ಅವರಿಗೂ ತಾತ್ಕಾಲಿಕ ಪರವಾನಿಗೆ ನೀಡಲಾಗುತ್ತಿದ್ದು ಕೋರ್ಟ್ ಆದೇಶ ಬರುವವರೆಗೆ ವರ್ಗಾಯಿಸಬಾರದೆಂದು ಸಾರಿಗೆ ಇಲಾಖೆಯವರು ತಿಳಿಸುತ್ತಿದ್ದಾರೆ. ಆದರೆ ಿಎನ್‌ಜಿ ಹಾಗೂ ಎಲ್ ಪಿ ಜಿ ಆಟೋ ಇರುವ ಮಾಲಕರು ಕೂಡ ಎಲೆಕ್ಟ್ರಿಕ್ ಆಟೋಗಳನ್ನು ಖರೀದಿಸಿ ಓಡಿಸಲು ಸಾರಿಗೆ ಇಲಾಖೆಯವರು ಪರವಾನಿಗೆಯನ್ನು ಈಗಲೂ ನೀಡುತ್ತಿದ್ದಾರೆ ಎನ್ನುವುದು ಅತ್ಯಂತ ವಿಪರ್ಯಾಸ ಸಂಗತಿ.

ಕೆಲವಾರು ಕಡೆಗಳಲ್ಲಿ ಆಟೋ ಪಾರ್ಟಿಗಳಲ್ಲಿ ನಿಲ್ಲಿಸಲು ಕೂಡ ಇ.ವಿ ಆಟೋಗಳಿಗೆ ಅವಕಾಶವನ್ನು ನೀಡುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಬ್ರಿಜೇಶ್, ಅಧ್ಯಕ್ಷ ಮೋಹನ್ ದಾಸ್, ಕಿರಣ್ ಸಿ ಆರ್, ಕ್ಲೆಮೆಂಟ್ ಡಿಸೋಜ, ಮೈಕಲ್, ಮಹೇಂದ್ರ ಕುಮಾರ್, ಪವನ್ ಕುಮಾರ್, ರಾಮ್ ದೇವಾಡಿಗ, ರಾಧಾಕೃಷ್ಣ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್
.