ಸ್ಥಳೀಯರಿಗೆ 68 ಶೇಕಡ ಉದ್ಯೋಗಾವಕಾಶ ನೀಡಿದ ಆಳ್ವಾಸ್ ಪ್ರಗತಿ 2026

0
7

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಯೋಜಿಸಲಾದ 16ನೇ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ 2026 ರಲ್ಲಿ 332 ಕಂಪನಿಗಳು ಭಾಗವಹಿಸಿ 15,539 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. 2416 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ಆಫರ್ ದೊರೆತಿದ್ದು 6183 ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ.

ಉತ್ಪಾದನಾ ವಲಯದಲ್ಲಿ 75 ಕಂಪನಿಗಳು 924 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ 523 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಐಟಿ ಕ್ಷೇತ್ರದಲ್ಲಿ 34 ಕಂಪನಿಗಳಿದ್ದು 96 ಅಭ್ಯರ್ಥಿಗಳು ಉದ್ಯೋಗ ಪಡೆದಿರುತ್ತಾರೆ. ಬ್ಯಾಂಕ್ ಹಣಕಾಸು ವಿಮೆ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ಲಭ್ಯವಾಗಿದೆ.

ಔಷಧೀಯ ಕ್ಷೇತ್ರದಲ್ಲಿ 40 ಅಭ್ಯರ್ಥಿಗಳು ಆಯ್ಕೆಗೊಂಡಿದ್ದಾರೆ. 13 ಅಭ್ಯರ್ಥಿಗಳು ಅಂತರಾಷ್ಟ್ರೀಯ ಉದ್ಯೋಗಾವಕಾಶವನ್ನು ಪಡೆದುಕೊಂಡಿರುತ್ತಾರೆ. ಉದ್ಯೋಗಾವಕಾಶಗಳ ನಿರಂತರ ಸಂಪರ್ಕಕ್ಕೆ ತಾಲೂಕು ಮಟ್ಟದ ಘಟಕಗಳನ್ನು ಸ್ಥಾಪಿಸಿ ಕಾರ್ಯವನ್ನು ನಿರಂತರವಾಗಿ ಮುಂದುವರಿಸುವ ಮನಸ್ಥಿತಿ ಹೊಂದಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಟ್ರಸ್ಟಿ ವ್ಯವಸ್ಥಾಪಕ ವಿವೇಕ್ ಆಳ್ವ, ಪ್ರಾಂಶುಪಾಲ ಡಾ ಕುರಿಯನ್, ಡಾ ಕುಮಾರಸ್ವಾಮಿ, ರಂಜಿತಾ ಆಚಾರ್ಯ, ಪ್ರಸಾದ್ ಶೆಟ್ಟಿ, ದಿಶಾ ಶೆಟ್ಟಿ ಉಪಸ್ಥಿತರಿದ್ದರು.