ತುಳುನಾಡ ರಕ್ಷಣಾ ವೇದಿಕೆ ನೀಡಿರುವ ಮನವಿಗೆ ತಕ್ಷಣ ಸ್ಪಂದಿಸಿದ ಬ್ರಹ್ಮಾವರ ಮೆಸ್ಕಾಂ ಅಧಿಕಾರಿಗಳು

ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕ, ಆರೂರು ಗ್ರಾಮದ ಅಡ್ಜಿಲು ಭಾಗದ ಗ್ರಾಮಸ್ಥರ ವಿದ್ಯುತ್ ವ್ಯತ್ಯಯ ದ ಸಮಸ್ಯೆಗೆ, ತುಳುನಾಡ ರಕ್ಷಣಾ ವೇದಿಕೆ ನೀಡಿರುವ ಮನವಿಗೆ ತಕ್ಷಣ ಸ್ಪಂದಿಸಿದ ಬ್ರಹ್ಮಾವರ ಮೆಸ್ಕಾಂ ಅಧಿಕಾರಿಗಳು ಸ್ಥಳ ಭೇಟಿ ನೀಡಿ, ಹೊಸ ಟಿಸಿ ಅಳವಡಿಸುವ ಬಗ್ಗೆ ತಿಳಿಸಿರುತ್ತಾರೆ.
ಆರೂರು ಗ್ರಾಮದ ಹಾಲೆಕಟ್ಟೆ ಬಳಿ ಇರುವ ಸುಮಾರು ಎರಡು ಮೂರು ತಿಂಗಳಿಂದ ಡೆಡ್ ಆಗಿರುವ ಟಿಸಿಯನ್ನು ಸರಿ ಮಾಡಿ ಕೊಡಬೇಕಾಗಿ ಕೇಳಿಕೊಂಡಾಗ ವಿಷಯ ತಿಳಿಸಿದ ಎರಡು ಗಂಟೆಯಲ್ಲಿ ಕಾರ್ಯಪ್ರವರ್ತರಾದ ಮೆಸ್ಕಾಂ ಅಧಿಕಾರಿಗಳು ಲೈನ್ ಮ್ಯಾನ್ ನವರು ಅತಿ ಶೀಘ್ರವಾಗಿ ಈ ಕಾರ್ಯ ನಡೆಯುವಲ್ಲಿ ಟಿಸಿಯನ್ನು ಮರುಜೋಡಿಸಿ ವಿದ್ಯುತ್ ಸಂಪರ್ಕ ಹಾಲೇಕಟ್ಟೆ ಆ ಟಿಸಿಯಿಂದ ಕೊಟ್ಟಿರುತ್ತಾರೆ, ಇದು ತುಳುನಾಡ ರಕ್ಷಣಾ ವೇದಿಕೆಯ ಮನವಿಗೆ ಸಿಕ್ಕ ಫಲ ಶ್ರುತಿ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಘಟಕದ ಈ ಮನವಿಗೆ ಸ್ಪಂದಿಸಿ ಅತಿ ಶೀಘ್ರವಾಗಿ ಕಾರ್ಯನ್ಮುಖರಾದ ಮೆಸ್ಕಾಂ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಂದು ತುಳುನಾಡ ರಕ್ಷಣಾ ವೇದಿಕೆ ತಿಳಿಸಿದೆ.
