ನಮ್ಮ ಕಂಬಳ ಪ್ರಶಸ್ತಿ 2026 : ಐಕಳ ಹರೀಶ್ ಶೆಟ್ಟಿಯವರಿಗೆ ಗೌರವ

0
31

ಮಂಗಳೂರು : ನಮ್ಮ ಕುಡ್ಲ, ನಮ್ಮ ಕಂಬಳ ಟೀಮ್, ಪಾಲೇಮಾರ್ ಗ್ರೂಪ್ ಆಯೋಜಿಸಿದ ನಮ್ಮ ಕಂಬಳ ಪ್ರಶಸ್ತಿ 2026 ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಬಾಗವಹಿಸಿದರು.

ಈ ಸಂದರ್ಭದಲ್ಲಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಸಭೆಯಲ್ಲಿ ಮೂಲ್ಕಿ ಅರಸರಾದ ದುಗ್ಗಣ್ಣ ಸಾವಂತರು, ಮಾಜಿ ಸಚಿವರಾದ ಜೆ ಕೃಷ್ಣ ಪಾಲೆಮಾರ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಒಕ್ಕೂಟದ ನಿರ್ದೇಶಕರಾದ ಉದಯಕುಮಾರ್ ಶೆಟ್ಟಿ ಮುನಿಯಾಲ್, ಮಿಥುನ್ ರೈ, ಮಾಜಿ ಸಚಿವ ರಮನಾಥ್ ರೈ, ಸುರೇಶ್ ಶೆಟ್ಟಿ ಮಿಜಾರ್, ಗುಣಪಾಲ ಕಡoಬ ನಮ್ಮ ಕುಡ್ಲ ನಿರ್ದೇಶಕರಾದ ಲೀಲಾಕ್ಷ ಕರ್ಕೇರ, ಸಹಾಯಕ ಹರೀಶ್ ಕರ್ಕೇರ ಮತ್ತು ಸಹೋದರರು ಬಾಗವಸಿದರು.