ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮೇಳ

0
16

ಮೂಡುಬಿದಿರೆ : ಕಡಂದಲೆಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್ ಕ್ರಾಫ್ ಟೆಕ್ನಾಲಜಿಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆ.21ರಂದು ವಿಜ್ಞಾನ ಮೇಳ ನಡೆಯಿತು.

ವಿಜ್ಞಾನ ಮೇಳದಲ್ಲಿ ಶಾಲೆಯ ಸುಮಾರು 33 ತಂಡಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರಾದ ಹೇಮಂತ್, ಕೃಷ್ಣಪ್ರಸಾದ್ ಹಾಗೂ ನಿಕ್ಷೇಪ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಫಲಿತಾಂಶ : ಪ್ರಥಮ: ಸೃಜನ್ ಮತ್ತು ನಿರಂಜನ್, ದ್ವಿತೀಯ: ಶ್ರಾವ್ಯ ವಿ. ಮತ್ತು ಮನಸ್ವಿ, ತೃತೀಯ: ಖುಷಿ ಮತ್ತು ಗೌತಮಿ ಜೆ. ಕೋಟ್ಯಾನ್; ತಿಲಕ್ ಮತ್ತು ರಿಷಿತ್, ಚತುರ್ಥ: ಸುಮನ್ ಆಚಾರ್ಯ ಮತ್ತು ನವನೀತ್; ಭವಿಷ್ ಮತ್ತು ಮಣಿಪ್ರಸಾದ್, ಪಂಚಮ: ಕಶ್ವಿ, ವೈಷ್ಣವಿ ಮತ್ತು ಶರಣ್ಯ.

ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಪುತ್ತೂರಿನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಿಗೆ ನಗದು ಬಹುಮಾನವೂ ನೀಡಲಾಗುವುದು.

ಆಯ್ಕೆಯಾದ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಸಂಚಾಲಕರು, ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಸುಧಾಕರ್ ಪೋಸ್ರಾಲ್, ರೂಪಿತ್ ರೈ, ಸಂಪತ್ ರಾಜ್, ಚಂದ್ರಕಲಾ ರಾಜಶೇಖರ್ ಹಾಗೂ ಜ್ಯೋತಿ ಉಪಸ್ಥಿತರಿದ್ದರು.