ಕುಂಪಲ : ಕುಂಪಲದ ಶ್ರೀ ಬಾಲಕೃಷ್ಣ ಮಂದಿರ (ರಿ.) ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ‘ಕುಂಪಲಾಷ್ಟಮಿ ಉತ್ಸವ-2026’ ಅನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಉತ್ಸವದ ಅಂಗವಾಗಿ ಬರುವ ಆಗಸ್ಟ್ 30, 2026 ರಂದು ಮಂದಿರದ ‘ಕೃಷ್ಣಾಂಗಣ’ದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಚಿತ್ರಕಲಾ ಸ್ಪರ್ಧೆ:-
5 ರಿಂದ 7 ನೇ ತರಗತಿ: ಶ್ರೀ ಕೃಷ್ಣನ ಚಿತ್ರ ಬಿಡಿಸುವುದು (ಪೆನ್ಸಿಲ್‌ನಲ್ಲಿ).
8 ರಿಂದ 9 ನೇ ತರಗತಿ: ಶ್ರೀ ಕೃಷ್ಣನ ಚಿತ್ರ ಬಿಡಿಸುವುದು (ಬಣ್ಣದ ಚಿತ್ರಕಲೆ).
10 ರಿಂದ ಪಿ.ಯು.ಸಿ ವರೆಗೆ: ಐಚ್ಛಿಕ ವಿಷಯ (ಸ್ಥಳದಲ್ಲಿ ಮಾಹಿತಿ ನೀಡಲಾಗುವುದು).
ಸಂಗೀತ ಸ್ಪರ್ಧೆ (ಭಕ್ತಿಗೀತೆ): ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ (ನರ್ಸರಿ, ಕೆ.ಜಿ ಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅವರ ವಯೋಮಿತಿಗೆ ಅನುಗುಣವಾಗಿ ಪ್ರತ್ಯೇಕ ವಿಭಾಗಗಳು).
ಕೃಷ್ಣ ವೇಷ ಸ್ಪರ್ಧೆ:
0 – 1.5 ವರ್ಷ: ಪುಟಾಣಿ ಕೃಷ್ಣ.
1.5 – 3.5 ವರ್ಷ: ಮುದ್ದುಕೃಷ್ಣ.
3.5 – 5.5 ವರ್ಷ: ಬಾಲಕೃಷ್ಣ.
ರಾಧಾಕೃಷ್ಣ ನೃತ್ಯ ಸ್ಪರ್ಧೆ: ಮುಕ್ತ ವಿಭಾಗ (ಅವಧಿ: 5 ನಿಮಿಷ).
ಈ ಕುರಿತಾಗಿ ಮಂದಿರದ ಅಧ್ಯಕ್ಷರಾದ ಸತೀಶ್ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷರಾದ ಸೂರಜ್ ಸಾಗರ್ ಮತ್ತು ಮಹಿಳಾ ಸಮಿತಿ ಅಧ್ಯಕ್ಷರಾದ ಗಾಯತ್ರಿ ಜಯಚಂದ್ರ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಸಾಂಸ್ಕೃತಿಕ ಸಂಚಾಲಕರು: ಪ್ರವೀಣ್ ಎಸ್ ಕುಂಪಲ: 98458 22090
ಜಗದೀಶ್ ಆಚಾರ್ಯ: 9964280281
-ಮಂದಾರ ರಾಜೇಶ್

