ದಿ. ಜಿ ಜಿ ವಾಸುದೇವ ಪ್ರಭು 1981 ರಲ್ಲಿ ಸ್ಥಾಪಿಸಿದ ಕೊಂಕಣಿ ಭಾಷೆ, ಸಂಸ್ಕೃತಿ, ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಸಾಂಸ್ಕೃತಿಕ ಸಂಘ ಆಗಸ್ಟ್ 23 ರಂದು ಕೆನರಾ ಶಾಲೆಯ ಸಭಾಗೃಹದಲ್ಲಿ ಕೊಂಕಣಿ ಮಾನ್ಯತಾ ದಿವಸ ಆಚರಿಸುತ್ತಾರೆ. 1992 ರಲ್ಲಿ ಕೊಂಕಣಿ ಭಾಷೆಗೆ ಕೇಂದ್ರ ಸರ್ಕಾರ ಸಂವಿಧಾನದ ಎಂಟನೇ ಪರೀಕ್ಷೆಯಲ್ಲಿ ಸ್ಥಾನವನ್ನು ನೀಡಿ ರಾಷ್ಟ್ರೀಯ ಭಾಷೆಯಲ್ಲಿ ಒಂದು ಎಂದು ಪರಿಗಣಿಸಿದೆ.
ಈ ವರ್ಷ ಎಸ್ ಎಲ್ ಶೇಟ್ ಜ್ಯುವೆಲರ್ಸ್ ಮತ್ತು ಡೈಮಂಡ್ ಹೌಸ್ ನ ಪ್ರಶಾಂತ್ ಶೇಟ್ ಮುಖ್ಯ ಅತಿಥಿಗಳಾಗಿದ್ದು ಎಂ ರಘುನಾಥ ಶೇಟ್ ಸ್ಮರಣಾರ್ಥ ಕೊಂಕಣಿ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದಾರೆ ಎಂದು ಅಧ್ಯಕ್ಷ ಕೃಷ್ಣ ಕಾಮತ್, ಕಾರ್ಯದರ್ಶಿ ಮಂಜುನಾಥ ಕಾಮತ್, ಉಪಾಧ್ಯಕ್ಷ ಅಶೋಕ ಕಾಮತ್, ಖಜಾಂಚಿ ಗೀತಾ ಭಟ್, ಮಾಜಿ ಅಧ್ಯಕ್ಷ ವೆಂಕಟೇಶ ಬಾಳಿಗ ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ್

