ಕಲಾಕುಂಚದಿಂದ ಸಡಗರ ಸಂಭ್ರಮದಿಂದ ಆಚರಿಸಿದ ಶ್ರೀ ವರಮಹಾಲಕ್ಷ್ಮೀ ವೃತ

0
34

ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ನಗರದ ಎಂ.ಸಿ.ಸಿ. `ಎ’ ಬ್ಲಾಕ್ ಶಾಖೆಯ ಆಶ್ರಯದಲ್ಲಿ ಶ್ರಾವಣ ಮಾಸದ ಶುಕ್ರವಾರದಂದು ಸಂಜೆ ವರಮಹಾಲಕ್ಷ್ಮೀ ವೃತ ಅತ್ಯದ್ಭುತವಾಗಿ ಸಡಗರ ಸಂಭ್ರಮದಿAದ ಆಚರಿಸಲಾಯಿತು ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ ತಿಳಿಸಿದರು.

ಕಲಾಕುಂಚ ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರರವರ ನೇತೃತ್ವದಿಂದ ಶ್ರೀದೇವಿ ಅಲಂಕಾರದಿAದ ಎಲ್ಲಾ ಮುತ್ತೆöÊದೆಯವರಿಗೆ ಅರಿಶಿಣ ಕುಂಕಮ ಇಟ್ಟು ಉಡಿ ತುಂಬಿ ಗೌರವಿಸಿದರು. ಮಹಿಳೆಯರು ಮಕ್ಕಳು ಸೇರಿ ಸರ್ವರೂ ಶ್ರೀ ಲಕ್ಷ್ಮೀ ಅಷ್ಟೋತ್ತರ, ಭಜನೆ ಹಾಡಿ ಶ್ರೀದೇವಿಗೆ ಆರತಿ ಬೆಳಗಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಎಲ್.ರಾಯ್ಕರ್, ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಸಮಿತಿ ಸದಸ್ಯರಾದ ಸವಿತಾ ವಿಜಯ ಕೂಲಂಬಿ, ಶಿಲ್ಪಾ ಉಮೇಶ್, ಮುಕ್ತಾ ಶ್ರೀನಿವಾಸಪ್ರಭು, ಶಾರದಾ ಕೃಷ್ಣಪ್ರಭು, ಪವಿತ್ರಾ ವಾಸುದೇವ ಎಲ್.ರಾಯ್ಕರ್, ಪ್ರೇಮ ಮಹೇಶ್ವರಯ್ಯ, ಮಮತಾ ಕೊಟ್ರೇಶ್ ಮುಂತಾದವರು ಉಪಸ್ಥಿತರಿದ್ದರು.