ಕೊಯಿಲ ನೋಣಯ್ಯ ಶೆಟ್ಟಿಗಾರ್ ನಿಧನ

0
25

ಬಂಟ್ವಾಳ : ಇಲ್ಲಿನ ಕೊಯಿಲ ಗ್ರಾಮದ ಪರಾರಿ ಮನೆ ನಿವಾಸಿ, ಹಿರಿಯ ಪ್ರಗತಿಪರ ಕೃಷಿಕ ನೋಣಯ್ಯ ಶೆಟ್ಟಿಗಾರ್ (87) ಇವರು ಅಲ್ಪ ಕಾಲದ ಅಸೌಖ್ಯ ದಿಂದ ಶನಿವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಐವರು ಪುತ್ರರು ಮತ್ತು ಪುತ್ರಿ ಇದ್ದಾರೆ. ಪ್ರಗತಿಪರ ಕೃಷಿಕರಾಗಿ, ಜಿಲ್ಲಾ ಪದ್ಮಶಾಲಿ ಮಹಾಸಭಾ ಉಪಾಧ್ಯಕ್ಷರಾಗಿ, ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಳದ ಟ್ರಸ್ಟಿಯಾಗಿ, ಕ್ರೀಡೋತ್ಸವ ಸಮಿತಿ ಸ್ಥಾಪಕಧ್ಯಕ್ಷರಾಗಿ, ಕೈತ್ರೋಡಿ ಕ್ವಾರ್ಟರ್ಸ್ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಸ್ಥಾಪಕ ಸದಸ್ಯರಾಗಿದ್ದರು.