ಅಂಧೇರಿ ಪಶ್ಚಿಮದ ವೃಂದಾವನ ವೆಜ್ ರೆಸ್ಟೋರೆಂಟ್‌ಗೆ ಪುತ್ತಿಗೆ ಶ್ರೀ ಭೇಟಿ

0
15

ಕೃಷ್ಣ ಸಾನಿಧ್ಯದ ವೃಂದಾವನ ಉಪಹಾರ ಶ್ರೀ ಕೃಷ್ಣ ಪ್ರಸಾದವಾಗಿರುತ್ತದೆ : ಶ್ರೀ ಡಾ. ಸುಣೆಂದ್ರ ತೀರ್ಥ ಶ್ರೀಪಾದರು

ಮುಂಬಯಿ : ಅಂಧೇರಿ ಪಶ್ಚಿಮ ಮೆಟ್ರೋ ನಿಲ್ದಾಣದ ಆಜಾದ್ ನಗರ ಸಮೀಪದ ಎಸ್‌ಪಿಜೆಐಎಂಆರ್ ಭವನ್ಸ್ ಕಾಲೇಜು ಕ್ಯಾಂಪಸ್‌ನ ಬಳಿ ಇರುವ ವೃಂದಾವನ ವೆಜ್ ರೆಸ್ಟೋರೆಂಟ್‌ನಗೆ ನವಿ ಮುಂಬೈಯ ವಾಸಿಯಲ್ಲಿ ಚಾತುರ್ಮಾತಾಚಾರಣೆಯಲ್ಲಿರುವ ಪುತ್ತಿಗೆ ಮಠದ ಶ್ರೀ ಡಾ. ಸುಣೆಂದ್ರ ತೀರ್ಥ ಶ್ರೀಪಾದರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಸ್ವಾಮೀಜಿ ಆಶೀರ್ವಚನ ನೀಡಿ ಭಗವಂತನ ಸಾನಿಧ್ಯ ಯಿರು ಈ ವೃಂದಾವನ ಹೋಟೆಲ್ ಗ್ರಾಹಕರಿಗೆ ಕೇವಲ ಉಪಹಾರವನ್ನು ಶುಚಿ ರುಚಿಯಾದ ತಿಂಡಿ ತಿನಸುಗಳನ್ನು ಬಹಳ ವಿನಮ್ರತೆಯಿಂದ ನೀಡಿ ಗ್ರಾಹಕರನ್ನು ಸಂತೃಪ್ತಿಗೊಳಿಸುತ್ತಿದ್ದಾರೆ. ಶ್ರೀ ಕೃಷ್ಣನ ಸಾನಿಧ್ಯವಿರುವ ಇಲ್ಲಿಯ ತಿಂಡಿ ತಿನಿಸುಗಳು ಕೃಷ್ಣನ ಪ್ರಸಾದವಾಗಿದೆ. ಎಲ್ಲರ ಬದುಕಿಗೆ ಭಗವದ್ಗೀತೆ ಬಹಳ ಅಗತ್ಯವಾಗಿದೆ. ಅದನ್ನು ಪಠಿಸುವ ಅಭ್ಯಾಸ ಮಾಡಬೇಕು ಅದರಲ್ಲಿ ಜೀವನದ ಸಾಗಿಸುವ ದಾರಿ ಇದೆ ಎಂದು ನುಡಿದರು.

ಹೋಟೆಲ್ ಆಡಳಿತ ಪಾಲುದಾರರಾಗಿರುವ ಪ್ರವೀಣ್ ಶೆಟ್ಟಿ ದಂಪತಿ ಪಾದಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಹೋಟೆಲ್ ಆಡಳಿತ ಪಾಲುದಾರರು , ಹೋಟೆಲ್ ಸಂಚಾಲಕರ ಹಿತೈಷಿಗಳು, ಭಕ್ತರು ಪಾಲ್ಗೊಂಡಿದ್ದರು.