ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆದ ಸಂಪಾಜೆ ರಂಗಸಂಗಮ (ರಿ.) ಬೆಂಗಳೂರು ಸಂಸ್ಥೆಯ ವಾರ್ಷಿಕೋತ್ಸವದ ಶುಭ ಸಮಾರಂಭ “ಸಂಪಾಜೆ ಸಾಂಸ್ಕೃತಿಕ ಸಂಭ್ರಮ-2” ದಲ್ಲಿ ಸಮಾಜ ಸೇವೆ, ದೈವರಾಧನೆ, ಧಾರ್ಮಿಕ, ಸಹಕಾರಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಹಾಗೂ ಅನನ್ಯ ಸೇವೆಯನ್ನು ಗುರುತಿಸಿ, ಉಡುಪಿಯ ಹೆಮ್ಮೆಯ ವಿನೋದ್ ಶೆಟ್ಟಿ ಅವರಿಗೆ ಪ್ರತಿಷ್ಠಿತ “ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ: ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿಗಳಾದ ರಮಾನಂದ ಗುರೂಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖ್ಯಾತ ಗಾಯಕರಾದ ಶಶಿಧರ್ ಕೋಟೆ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರು ಹಾಗೂ ಚಿತ್ರ ನಿರ್ದೇಶಕರಾದ ರಮೇಶ್ ಸುರ್ವೆ ಲೋಹಿತ್ ಎನ್., ಮಹಿಳಾ ಉದ್ಯಮಿ ವಿದ್ಯಾಲತಾ ಶೆಟ್ಟಿ ಬನ್ನಂಜೆ ಹಾಗೂ ಕಾರ್ಯಕ್ರಮದ ರೂವಾರಿ, ಸಂಪಾಜೆ ರಂಗಸಂಗಮದ ಸಂಸ್ಥಾಪಕರಾದ ಶ್ರೀ ರಾಜ್ ಸಂಪಾಜೆ ಅವರು ಉಪಸ್ಥಿತರಿದ್ದು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.
ಸಾಧಕ ವಿನೋದ್ ಶೆಟ್ಟಿ ಅವರ ಪರಿಚಯ: ವಿನೋದ್ ಶೆಟ್ಟಿ ಅವರು ನಮ್ಮ ಉಡುಪಿ ಟಿವಿಯ ಪ್ರವರ್ತಕರು, ವಿ.ಎಸ್. ಗ್ರೂಪ್ ಮತ್ತು ಮಹಾಗಣಪತಿ ಸೌಹಾರ್ದ ಸಹಕಾರಿ ನಿಯಮಿತದ ಆಡಳಿತ ನಿರ್ದೇಶಕರು, *ತುಳುನಾಡು ವಾರ್ತೆ* ಸೇರಿದಂತೆ ಹಲವಾರು ಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಅಖಿಲ ಭಾರತ ದೈವರಾಧಕರ ಒಕ್ಕೂಟ (ರಿ.) ಕೇಂದ್ರೀಯ ಉಡುಪಿ ಜಿಲ್ಲೆಯ ಸಂಸ್ಥಾಪಕ ಅಧ್ಯಕ್ಷರು, ಹಲವಾರು ತುಳು ಸಂಘಟನೆಗಳ ಸದಸ್ಯರು ಹಾಗೂ ಹಲವಾರು ದೈವಸ್ಥಾನ-ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಹಲವಾರು ಸಂಘ ಸಂಸ್ಥೆಗಳ ಸಂಸ್ಥಾಪಕರಾಗಿದ್ದು, ಕಳೆದ 17 ವರ್ಷಗಳಿಂದ ತಮ್ಮ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವಗಳಲ್ಲಿ 500ಕ್ಕೂ ಹೆಚ್ಚು ಮಂದಿಗೆ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ನೀಡಿ ಗೌರವಿಸಿದ್ದಾರೆ. ಯಾವುದೇ ಕಾರ್ಯಕ್ರಮವನ್ನು ಯೋಜಿಸಿದರೂ ಅದು ವಿಭಿನ್ನವಾಗಿರುತ್ತದೆ ಹಾಗೂ ಯಶಸ್ವಿಯಾಗಿ ನಡೆಯುತ್ತದೆ ಎಂಬುದು ಇವರ ಹೆಗ್ಗಳಿಕೆ. ಸಮಾಜಮುಖಿ ಕಾರ್ಯಗಳಾದ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ದೈವಸ್ಥಾನ ಸ್ವಚ್ಛತಾ ಆಂದೋಲನಗಳನ್ನು ತಮ್ಮ ನೇತೃತ್ವದಲ್ಲಿ ಆಯೋಜಿಸುತ್ತಾ, ಇತರೆ ಸಂಘಟನೆಗಳೊಂದಿಗೆ ಕೈಜೋಡಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಲ್ಲಿ ಸಂಘಟನಾ ಚತುರ ಎಂದು ಜನಪ್ರಿಯರಾಗಿದ್ದಾರೆ.
ಅನಾದಿ ಕಾಲದಿಂದ ಹಿರಿಯರು ನಡೆಸಿಕೊಂಡು ಬಂದಿರುವ ದೈವರಾಧನೆಯ ಮೂಲ ಕಟ್ಟುಕಟ್ಟಳೆಗಳ ಉಳಿವಿಗಾಗಿ ಹಾಗೂ ದೈವ ಚಾಕರಿಯವರ ಮೂಲ ಸೌಲಭ್ಯಗಳಿಗಾಗಿ ಸರ್ಕಾರದ ಮಟ್ಟದಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ತುಳು ಭಾಷೆ, ತುಳು ಸಂಸ್ಕೃತಿಯ ಬಗ್ಗೆ ಅಪಾರ ಒಲವು ಹೊಂದಿರುವ ಇವರು, ಯಾವುದೇ ಕಾರ್ಯಕ್ರಮದ ನಿರೂಪಣೆಯನ್ನು ತುಳು ಭಾಷೆಯಲ್ಲಿ ವಿಭಿನ್ನವಾಗಿ ನಡೆಸಿಕೊಡುವುದು ಇವರ ವಿಶೇಷ.
ಹಾಗೂ ಉತ್ತಮ ಬರಹಗಾರರಾಗಿದ್ದಾರೆ.
ಇವರು ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಮುಕ್ಕಾಲ್ದಿ ಹಾಗೂ *ಉಡುಪಿ ತೆಂಕಪೇಟೆ ಬೊಬ್ಬರ್ಯ, ಕಾಂತೇರಿ ಜುಮಾದಿ, ಕಲ್ಕುಡ, ಕೊರಗಜ್ಜ ದೈವಸ್ಥಾನದ ಶೆಟ್ಟಿ ಬಾಲೆ *ಯಾಗಿ ದೈವಚಾಕರಿ ನಿರ್ವಹಿಸುತ್ತಿದ್ದು, ಉಡುಪಿ-ಮಂಗಳೂರು ಭಾಗದ ಪ್ರಮುಖ ದೈವಸ್ಥಾನ ಹಾಗೂ ಮನೆತನದ ದೈವಸ್ಥಾನಗಳಲ್ಲಿ ದೈವಕ್ಕೆ ಮದಿಪು ಹೇಳುವ ಮೂಲಕ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ವಿನೋದ್ ಶೆಟ್ಟಿ ಅವರ ಈ ಸಾಧನೆ ಇನ್ನಷ್ಟು ಸಾಧಕರಿಗೆ ಪ್ರೇರಣೆಯಾಗಲಿ, ಅವರ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಹಾರೈಸಿದ್ದಾರೆ.

