ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ

0
7

ಕರ್ನಾಟಕ ಸರ್ಕಾರ, ಅಂತರ್ಜಲ ನಿರ್ದೇಶನಾಲಯ ಬೆಂಗಳೂರು , ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂತರ್ಜಲ ಇಲಾಖೆ ಉಡುಪಿ ಇವರು ನಡೆಸಿದ ನಮ್ಮ ಭೂಮಿ ನಮ್ಮ ನೀರು ನಮ್ಮ ಶಕ್ತಿ ಎಂಬ ವಿಷಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಆಶಿಶ್ ಪ್ರಥಮಸ್ಥಾನ, 9ನೇ ತರಗತಿಯ ಐಸಿರಿ ಎಂ ದ್ವಿತೀಯ ಸ್ಥಾನ, 10ನೇ ತರಗತಿಯ ವರ್ಷಿತ್ ತೃತೀಯ ಸ್ಥಾನದೊಂದಿಗೆ ಪ್ರಮಾಣಪತ್ರ, ಬಹುಮಾನ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.