ಲಕ್ಷ್ಮೀನಗರ ಗರ್ಡೇ ಸಿರಿಗಂಗಾ ಪುಷ್ಕರಣಿ ಕೆರೆ ಬಳಿ ಸಾರ್ವಜನಿಕರಿಗೆ ಕಾಂಕ್ರೀಟ್ ಬೆಂಚ್‌ಗಳ ಹಸ್ತಾಂತರ

0
21

ರೋಟರಿ ಕ್ಲಬ್ ಕಲ್ಯಾಣಪುರ ಕೊಡುಗೆ: ಶಾಸಕ ಯಶ್‌ಪಾಲ್ ಸುವರ್ಣ ಅವರಿಂದ ಉದ್ಘಾಟನೆ

​ಉಡುಪಿ : ಇಲ್ಲಿನ ಲಕ್ಷ್ಮೀನಗರ ಗರ್ಡೇ ಸಿರಿಗಂಗಾ ಪುಷ್ಕರಣಿ ಅಭಿವೃದ್ಧಿ ಸಮಿತಿ ಹಾಗೂ ಗೆಳೆಯರ ಬಳಗದ ವಿಶೇಷ ವಿನಂತಿಗೆ ಸ್ಪಂದಿಸಿ, ಸಾರ್ವಜನಿಕರ ಉಪಯೋಗಕ್ಕಾಗಿ ರೋಟರಿ ಕ್ಲಬ್ ಕಲ್ಯಾಣಪುರ ವತಿಯಿಂದ ಕೆರೆಯ ಆವರಣದಲ್ಲಿ ಕುಳಿತುಕೊಳ್ಳಲು ೪ ಕಾಂಕ್ರೀಟ್ ಬೆಂಚ್‌ಗಳನ್ನು ಹಸ್ತಾಂತರಿಸಲಾಯಿತು. ಈ ನೂತನ ಸೌಲಭ್ಯದ ಉದ್ಘಾಟನಾ ಕಾರ್ಯಕ್ರಮವನ್ನು ಮಾನ್ಯ ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ ಅವರು ನೆರವೇರಿಸಿದರು.

​ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿಕಟಪೂರ್ವ ನಗರಸಭಾ ಸದಸ್ಯರಾದ ಕೆ. ವಿಜಯ ಕೊಡವೂರು ಅವರು, “ಈ ಸಿರಿಗಂಗಾ ಪುಷ್ಕರಣಿ ಕೆರೆಯು ಸರ್ಕಾರದ ಅನುದಾನದ ಅಡಿಯಲ್ಲಿ ಅಭಿವೃದ್ಧಿಗೊಂಡ ಪ್ರಮುಖ ಜಲಮೂಲವಾಗಿದೆ. ಈ ಪರಿಸರವನ್ನು ಇನ್ನಷ್ಟು ಸುಂದರ ಹಾಗೂ ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಲು ಗೆಳೆಯರ ಬಳಗ ಮತ್ತು ಅಭಿವೃದ್ಧಿ ಸಮಿತಿ ಮಾಡಿದ ಮನವಿಗೆ ತಕ್ಷಣ ಸ್ಪಂದಿಸಿ ೪ ಕಾಂಕ್ರೀಟ್ ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದ ರೋಟರಿ ಕ್ಲಬ್ ಕಲ್ಯಾಣಪುರ ಸಂಸ್ಥೆಯ ಸಾಮಾಜಿಕ ಕಳಕಳಿ ಅತ್ಯಂತ ಶ್ಲಾಘನೀಯ” ಎಂದು ಹೇಳಿದರು.

ಮಾನ್ಯ ಶಾಸಕರಾದ ಯಶ್‌ಪಾಲ್ ಸುವರ್ಣ ಅವರಿಂದ ಕಾಂಕ್ರೀಟ್ ಬೆಂಚ್‌ಗಳ ಲೋಕಾರ್ಪಣೆ. ಸಾರ್ವಜನಿಕ ಸೇವಾ ಕಾರ್ಯವನ್ನು ಗುರುತಿಸಿ, ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷರಾದ ಗಿರಿಶ್ಚಂದ್ರ ಆರ್. ಅವರನ್ನು ಸಿರಿಗಂಗಾ ಪುಷ್ಕರಣಿ ಅಭಿವೃದ್ಧಿ ಸಮಿತಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಿರಿಗಂಗಾ ಪುಷ್ಕರಣಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಣಿಕಂಠ, ಮಹಿಳಾ ಸಮಿತಿಯ ಅಧ್ಯಕ್ಷೆ ಜಯಂತಿ, ಹಾಗೂ ಪ್ರಮುಖರಾದ ಶೇಖರ್ ಪೂಜಾರಿ ಸೇರಿದಂತೆ ಸ್ಥಳೀಯ ನಾಯಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

​ಆರಂಭದಲ್ಲಿ ಅಮಿತ್ ಗರ್ಡೇ ಅವರು ಆಗಮಿಸಿದ ಸರ್ವ ಗಣ್ಯರನ್ನು ಹಾಗೂ ಬಂಧುಗಳನ್ನು ಸ್ವಾಗತಿಸಿದರು. ರಾಜು ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.