ದಾವಣಗೆರೆ : ಮಕ್ಕಳು ಗಾಯನದೊಂದಿಗೆ ವಿದ್ಯಾಭ್ಯಾಸದಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶದೊAದಿಗೆ ಪೋಷಕರ ಕನಸು ನನಸು ಮಾಡಬೇಕಾಗಿದೆ. ವೇದಿಕೆಯಲ್ಲಿ ಸಂಗೀತ ಮನೋರಂಜನೆಗೆ ಸೀಮಿತವಾಗದೇ ಮಾನವನ ಜ್ಞಾನ, ಪರಿಜ್ಞಾನ ಹೆಚ್ಚುತ್ತದೆ. ಎಲೆ ಮರೆಯಕಾಯಿ ಪ್ರತಿಭಾವಂತ ಗಾಯಕ-ಗಾಯಕಿಯರಿಗೆ, ಮಕ್ಕಳಿಗೆ ಮುಕ್ತಾವಾದ ವೇದಿಕೆ ಕಲ್ಪಿಸಿ ಅವರವರ ಪ್ರತಿಭೆಗಳನ್ನು ಅನಾವರಣಗೊಳಿಸುತ್ತಿರುವ ಹರಿಹರದ ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಸಾಧನೆ ಶ್ಲಾಘನೀಯ ಎಂದು ಹರಿಹರ ಶಾಸಕರಾದ ಬಿ.ಪಿ.ಹರೀಶ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ಶಾಖೆಯಿಂದ ಇತ್ತೀಚಿಗೆ ಹರಿಹರದ ನಡುವಲ ಪೇಟೆಯ ನಾಮದೇವ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶ್ರಾವಣ ಸಂಭ್ರಮಕ್ಕೆ ಉಚಿತ ಸಮೂಹ ಗಾಯನ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಶಾಸಕರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆಯ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್‌ಶೆಣೈ, ಹರಿಹರ ಮಾಜೀ ನಗರಸಭಾ ಅಧ್ಯಕ್ಷರಾದ ರೇವಣಸಿದ್ದಪ್ಪ, ಹರಿಹರದ ನಾಮದೇವ ಸಿಂಪಿ ಅಧ್ಯಕ್ಷರಾದ ಶಂಕರ ಖಟಾವಕರ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಹರಿಹರ ಶಾಖೆಯ ಉಪಾಧ್ಯಕ್ಷರಾದ ಶ್ರೀಮತಿ ಸುಮನ್ ಖಮಿತ್ಕರ್, ಪರಿಷತ್ತಿನ ಗೌರವ ಸಲಹೆಗಾರರಾದ ಪ್ರಮೀಳ ನಾಗರಾಜ್ ನಲ್ಲೂರು, ಮುಂತಾದವರು ಮಾತನಾಡಿ ಗಾಯನ ಜೀವನಕ್ಕೆ ಒಂದು ಸ್ಪೂರ್ತಿ, ಖಿನ್ನತೆ ಮನಸ್ಸುಗಳನ್ನು ಪುಳಕಿತಗೊಳಿಸುವ ಸಾಧನೆ ಸಂಗೀತ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಹರಿಹರ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಶೇಷಗಿರಿಯವರು ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಸಂಸ್ಕೃತಿಯೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಡಿಗೆ ಮನೆಗೆ ಸೀಮಿತವಾದ ಮಹಿಳೆಯರಿಗೆ ಈ ಗಾಯನದೊಂದಿಗೆ ಮನಸ್ಸು ಪುಳಕಿತವಾಗುತ್ತದೆ ಎಂದರು.
ಮಹಿಳೆಯರು, ಮಕ್ಕಳು ಸೇರಿದಂತೆ ಸಮಾರು 26 ತಂಡಗಳು ಭಾವಗೀತೆ, ಭಕ್ತಿಗೀತೆ, ಜನಪದಗೀತೆ, ದೇಶಭಕ್ತಿಗೀತೆಯೊಂದಿಗೆ ವಿಜೃಂಭಣೆಯಿAದ ಈ ಸಮಾರಂಭ ಯಶಸ್ವಿಗೊಳಿಸಿದರು. ವೇದಿಕೆಯಲ್ಲಿ ಮುಕ್ತವಾದ ಅವಕಾಶಕೊಟ್ಟ ತಂಡಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಇತ್ತೀಚಿಗೆ ಸ್ವರ್ಗಸ್ಥರಾದ ಗಾನಕೋಗಿಲೆ ಎಸ್.ಜಾನಕಿಯವರ ಸ್ಮರಿಸುತ್ತಾ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ವೀರೇಶ್‌ಕುಮಾರ್ ಗುತ್ತೂರು ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಪರಿಷತ್ತಿನ ಹರಿಹರ ಶಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಅಶ್ವಿನಿ ಅರುಣ್‌ಕುಮಾರ್ ಸ್ವಾಗತಿಸಿದರು. ಪರಿಷತ್ತಿನ ಖಜಾಂಚಿಯಾದ ಕೊಟ್ರೇಶಪ್ಪ ವಿ.ಬಿ. ಅಚ್ಚುಕಟ್ಟಾಗಿ ನಿರೂಪಿಸಿದರು. ಸುಭಾಷಿತ ಪತ್ರಿಕೆಯ ಪ್ರಧಾನ ಸಂಪಾದಕರಾದ ಪರಿಷತ್ತಿನ ಸಮಿತಿ ಸದಸ್ಯರಾದ ಡಾ. ಜೈಮುನಿಯವರು ಸಮಾರಂಭ ಸುಸಂಪನ್ನಗೊಳಿಸಿದರು. ಕೊನೆಗೆ ಶಾಂತಾ ಆರ್. ಭಟ್ ವಂದಿಸಿದರು.

