ಮೂಡುಬಿದಿರೆ: ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾ ಚಾರ್ಯವರ್ಯ ಮಹಾಸ್ವಾಮೀಜಿ ಅವರ ಪವಿತ್ರ ಸಾನ್ನಿಧ್ಯದಲ್ಲಿ ‘ವಿಶೇಷ ತಾಳಮದ್ದಳೆ’ ಕಾರ್ಯಕ್ರಮವು ಆಗಸ್ಟ್ 29ರಂದು ಸಂಜೆ 6.35ಕ್ಕೆ ಮೂಡುಬಿದಿರೆ ಮಹಾವೀರ ಭವನದಲ್ಲಿ ನಡೆಯಲಿದೆ.
ಪಟ್ಣಾಭಿಷೇಕ 27ನೇ ವರ್ಷದ ವರ್ಧಂತ್ಯುತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ‘ಭೀಷ್ಮ ಸೇನಾಧಿಪತ್ಯ’ ಹಾಗೂ ‘ಕರ್ಣಬಂಧ’ ಎಂಬ ಪ್ರಸಂಗಗಳ ತಾಳಮದ್ದಳೆ ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹಿಮ್ಮೇಳವಾಗಿ ಮಹೇಶ್ ಕನ್ನಡಿ, ಭರತ್ ಶೆಟ್ಟಿ ಸಿದ್ದಕಟ್ಟೆ ಸೇರಿದಂತೆ ಕಲಾವಿದರು ಭಾಗವಹಿಸಲಿದ್ದು, ಚಂಡೆ–ಮದ್ದಳೆ ವಾದನದಲ್ಲಿ ಚಂದ್ರಶೇಖರ ಭಟ್ ಉಜಿರೆ ಸೇರಿದಂತೆ ಕಲಾವಿದರು ಸಹಕರಿಸಲಿದ್ದಾರೆ. ಮದ್ದಳೆ ವಾದನಕ್ಕೆ ಚಂದ್ರಶೇಖರ ಗುರುವಾಯನಕೆರೆ ಭಾಗವಹಿಸಲಿದ್ದಾರೆ.
ಮುಮ್ಮೇಳದಲ್ಲಿ ಡಾ. ಎಂ.ಎಂ. ಪ್ರಭಾಕರ ಜೋಶಿ, ವೆಂಕಟರಮಣ ಭಟ್ಟ, ಡಾ. ವಿನಾಯಕ ಚಂದ್ರಶೇಖರ ಭಟ್ಟ ಗಾಳಿಮನೆ ಹಾಗೂ ಪ್ರೊ. ರಂಜಿತ್ ಜೈನ್ ಕಾಂತಾವರ ಸೇರಿದಂತೆ ಯಕ್ಷಗಾನ ಕಲಾವಿದರು ಭಾಗವಹಿಸಲಿದ್ದಾರೆ.
ಸರ್ವರಿಗೂ ಸಾರ್ವಜನಿಕವಾಗಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಲಾಗಿದೆ. ಕಾರ್ಯಕ್ರಮವನ್ನು ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ.) ಹಾಗೂ ಶ್ರೀ ಜೈನ ಮಠ ಟ್ರಸ್ಟ್ (ರಿ.) ಸಹಯೋಗದಲ್ಲಿ ಆಯೋಜಿಸಲಾಗಿದೆ.

