ವಿಧಾನಪರಿಷತ್ತಿನ ಶಾಸಕರಾದ ಐವನ್ ಡಿʼಸೋಜಾರವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಧಿನಿಯಮ 1994ರ ಕಲಂ-21(1)(ಗಿiii) ರನ್ವಯ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ಗೆ ಸದಸ್ಯರನ್ನಾಗಿ ದಿನಾಂಕ: 25-08-2026ರಂದು ಮಾನ್ಯ ಸಭಾಪತಿಯವರು ನಾಮನರ‍್ದೇಶನ ಮಾಡಿರುತ್ತಾರೆ. ಇವರು ದಿನಾಂಕ:17-06-2030 ರ ತನಕ ಸೆನೆಟ್ ಸದಸ್ಯರಾಗಿ ಕರ‍್ಯನಿರ‍್ವಹಿಸಲಿದ್ದಾರೆ.
ಐವನ್ ಡಿ’ಸೋಜಾ ಅವರು ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ವಿಶ್ವವಿದ್ಯಾನಿಲಯದಲ್ಲಿ ಹಲವು ಹೊಸ ಕರ‍್ಸ್‌ಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖವಾಗಿ ಶ್ರಮಿಸಿದ್ದಾರೆ. ಅಲ್ಲದೆ, ಮಂಗಳೂರು ವಿಶ್ವವಿದ್ಯಾನಿಲಯದ ಚುನಾಯಿತ ಸದಸ್ಯರಾಗಿ, ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಹಾಗೂ ವಿವಿಧ ವಿಶ್ವವಿದ್ಯಾನಿಲಯದ ಸಮಿತಿಗಳಲ್ಲಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಾರ‍್ವಜನಿಕ ಸೇವೆಯಲ್ಲಿ ಹಲವು ಜವಾಬ್ದಾರಿಗಳನ್ನು ನರ‍್ವಹಿಸಿರುವ ಅವರು ರ‍್ನಾಟಕ ರ‍್ಕಾರದ ಮುಖ್ಯ ಸಚೇತಕರಾಗಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ‍್ಯದ ರ‍್ಶಿಯಾಗಿ ಸಹ ಸೇವೆ ಸಲ್ಲಿಸಿದ್ದಾರೆ.
ಆರೋಗ್ಯ ಶಿಕ್ಷಣ ಹಾಗೂ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಅಭಿವೃದ್ಧಿಯ ಕ್ಷೇತ್ರದಲ್ಲಿ ಐವನ್ ಡಿ’ಸೋಜಾ ಅವರ ಅನುಭವ ಮತ್ತು ಸೇವೆ ಸೆನೆಟ್ ಸದಸ್ಯರಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿರೀಕ್ಷೆಯಿದೆ.

