ಹೆಬ್ರಿ : ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ, “ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮ”ವನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು. ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷರಾದ ಶ್ರೀ ಗುರುದಾಸ್ ಶೆಣ್ಣೈರವರು, ವಸತಿ ನಿಲಯದ ಕಮಿಟಿಯ ಸದಸ್ಯರಾದ ರಾಮಕೃಷ್ಣ ಆಚಾರ್, ಪ್ರಾಂಶುಪಾಲರಾದ ಅರುಣ್ ಹೆಚ್ ವೈ , ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಿಜಯ ಕುಮಾರ್ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಪ್ರದಾಯ ಬದ್ಧವಾಗಿ ಸಂಸ್ಥೆಯ ಮಾತಾಜಿಯವರಿಂದ, ಸಿಬ್ಬಂದಿ ವರ್ಗದವರಿಂದ, ಶ್ರೀರಕ್ಷೆ ರಾಖಿಯನ್ನು ಕಟ್ಟಿಸಿಕೊಂಡು, ಸಿಹಿ ತಿಂದು ಸಂಭ್ರಮಿಸಿದರು. ಸಾಮೂಹಿಕ ರಕ್ಷಾಬಂಧನದಲ್ಲಿ ಸಂಸ್ಥೆಯ ಗುರೂಜಿಯವರು,ವಾಹನ ಚಾಲಕರು, ಸಂಸ್ಥೆಯ ಅಡುಗೆ ಸಿಬ್ಬಂದಿಗಳು, ಕಚೇರಿ ಸಿಬ್ಬಂದಿಗಳು ಶಾಲಾ ಸಹಾಯಕ, ಸಹಾಯಕಿಯರು, ವಸತಿ ನಿಲಯದ ಮೇಲ್ವಿಚಾರಕರು ರಕ್ಷೆ ಕಟ್ಟಿ-ಕಟ್ಟಿಸಿಕೊಂಡು ಸಂಭ್ರಮಿಸಿ ,ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಸಂಸ್ಥೆಯ ಸಾವಿರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಮೂಹಿಕ ರಕ್ಷಾಬಂಧನದಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ, ರಕ್ಷೆ ಕಟ್ಟಿ- ಕಟ್ಟಿಸಿಕೊಂಡು ಸಿಹಿ ತಿಂದು ಸಂತಸ ಪಟ್ಟರು. ರಕ್ಷಾಬಂಧನದ ಸಂದೇಶವನ್ನು ವಾಚಿಸಲಾಯಿತು.

