ಅಂಚೆ ಇಲಾಖೆಯ ಮಹಿಳೆಯರಿಗೆ ಮನರಂಜನೆ, ಸಾಂಸ್ಕೃತಿಕ ಸಮಾರಂಭ ಮಾಡುತ್ತಿರುವ ಕಲಾಕುಂಚ ಸಂಸ್ಥೆ ಶ್ಲಾಘನೀಯ-ಬಿ.ನಾಗರಾಜ್

0
40

ದಾವಣಗೆರೆ : ಅಂಚೆ ಇಲಾಖೆಯ ಸಿಬ್ಬಂದಿಗಳು ಉದ್ಯೋಗದ ಒತ್ತಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಹಜ. ಭಾರತದ ಕೇಂದ್ರ ಸರ್ಕಾರದ ಎಲ್ಲೂ ಮಾಡದಿರುವ ಅಂಚೆ ಇಲಾಖೆಯ ಮಹಿಳೆಯರಿಗೆ ಮನರಂಜನೆ, ಸಾಂಸ್ಕೃತಿಕ ಚಟುವಟಿಕೆಗಳು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕಠಿಣ ಪರಿಶ್ರಮದಿಂದ ಈ ಶ್ರಾವಣ ಸಂಭ್ರಮ ಪ್ರತೀ ವರ್ಷ ನಡೆಸುತ್ತಿರುವುದು ಶ್ಲಾಘನೀಯ ಎಂದು ದಾವಣಗೆರೆಯ ಜಯದೇವ ವೃತ್ತದ ಕಛೇರಿಯ ಪಾಲಕರಾದ ಬಿ.ನಾಗರಾಜರವರು ಜಯದೇವ ವೃತ್ತದಲ್ಲಿ ಇರುವ ಅಂಚೆ ಇಲಾಖೆಯ ಸಭಾಂಗಣದಲ್ಲಿ ಗಿಡಕ್ಕೆ ನೀರೆದು ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್‌ರಾಯ್ಕರ್‌ರವರು ಮಾತನಾಡಿ, ಎಲ್ಲಾ ಗಡಿಗಳಲ್ಲಿ ಯೋಧರು ದೇಶವನ್ನು ಕಾಯುವಂತೆ ಭಾರತದ ಒಳಗಿರುವ ಸಾರ್ವಜನಿಕರ ಸೇವೆಯಲ್ಲಿ ನಿರಂತರವಾಗಿ ಕಠಿಣಪರಿಶ್ರಮದಿಂದ ತೊಡಗಿಸಿಕೊಂಡವರು ಅಂಚೆ ಇಲಾಖೆಯ ಉದ್ಯೋಗಿಗಳು. ಅಂಚೆ ನೌಕರರು ಕೂಡ ಕೇಂದ್ರ ಸರ್ಕಾರದ ನೌಕರರು ಕೂಡ ಕೇಂದ್ರ ಸರ್ಕಾರದ ನೌಕರರಾಗಿದ್ದರೂ ಅವರಿಗೆ ತಮ್ಮದೇ ಆದ ಕುಟುಂಬ ಮತ್ತು ಸಂಸಾರದ ಜವಾಬ್ದಾರಿಗಳಿರುತ್ತದೆ ಆದರೂ ಅವರು ಸಾರ್ವಜನಿಕರಿಗೆ ಸೇವೆಗಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿತ್ತಾರೆ ಎಂದರು.

ಅಂಚೆ ಇಲಾಖೆಯ ಮಹಿಳೆಯರಿಗೆ `ಶ್ರಾವಣ ಸಂಭ್ರಮ’ದ ಪ್ರಯುಕ್ತ ಆಕರ್ಷಕ ಗೃಹಿಣಿ ಉಚಿತ ಸ್ಪರ್ಧೆ ಹಮ್ಮಿಕೊಂಡಿದ್ದು ಪ್ರಥಮ ಬಹುಮಾನ ಶ್ವೇತಾ, ದ್ವಿತೀಯ ಬಹುಮಾನ ಶ್ರೀಮತಿ ಪೂಜಾ, ತೃತೀಯ ಬಹುಮಾನ ಮೀನಾಕ್ಷಿ ಸಮಾದಾನಕರ ಬಹುಮಾನ ಜ್ಯೋತಿ ಪಡೆದಿರುತ್ತಾರೆ.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾಗಿ ಲಲಿತಾ ಕಲ್ಲೇಶ್, ಕಲಾಕುಂಚ ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಮಾತನಾಡಿ, ಕಲಾಕುಂಚ ಸಂಸ್ಥೆಗೆ ಕಳೆದ 36 ವರ್ಷಗಳಿಂದ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂಚೆ ಇಲಾಖೆಯ ಮಹಿಳೆಯರಿಗೆ ಬೆಳಗಿನ ಜಾವ ಮನೆ ಕೆಲಸ, ಮಕ್ಕಳ ನಿರ್ವಹಣೆ ನಡೆಸುವುದು ಕಷ್ಟದ ಕೆಲಸ ಆದರೂ ಮಹಿಳೆಯರು ಸಮಯ ಪ್ರಜ್ಞೆಯೊಂದಿಗೆ ಅಂಚೆ ಕಛೇರಿಗೆ ಅಗಮಿಸಿ ತಮ್ಮ ತಮ್ಮ ಉದ್ಯೋಗ ನಿರ್ವಹಿಸುತ್ತಾರೆ ಎಂದರು.

ಆಕರ್ಷಕ ಗೃಹಿಣಿ ಉಚಿತ ಸ್ಪರ್ಧೆಯ ತೀರ್ಪುಗಾರರಾಗಿ ಲಲಿತಾ ಕಲ್ಲೇಶ್, ಪ್ರಭಾ ರವೀಂದ್ರ, ಜವಾಬ್ದಾರಿ ತೆಗೆದುಕೊಂಡಿದ್ದಾರೆ. ನೂತನವಾಗಿ ಅಂಚೆ ಇಲಾಖೆಯ ಜಯದೇವ ವೃತ್ತದ ಕಛೇರಿಗೆ ಆಗಮಿಸಿದ ಬಿ.ನಾಗರಾಜ್‌ರವರಿಗೆ ಕಲಾಕುಂಚದಿAದ ಸನ್ಮಾನಿಸಿದರು. ಪ್ರಾರಂಭದಲ್ಲಿ ಸವಿತಾ ವಿಜಯಕುಮಾರ್ ಕೂಲಂಬಿ ಪ್ರಾರ್ಥನೆ ಮಾಡಿ ಶಿಲ್ಪಾ ಉಮೇಶ್ ಸ್ವಾಗತಿಸಿದರು. ಪೂಜಾ ಪಿ., ಶ್ವೇತಾ ಎನ್., ಜ್ಯೋತಿ ಹೆಚ್.ಪಿ. ಕನ್ನಡ ಹಾಡು, ಭಕ್ತಿಗೀತೆ ನೃತ್ಯದೊಂದಿಗೆ ಪ್ರೇಕ್ಷಕರಿಗೆ ಸೊಗಸಾದ ಮನರಂಜನೆ ಮಾಡಿದರು. ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ಅಚ್ಚುಕಟ್ಟಾಗಿ ನಿರೂಪಣೆ ಮಾಡಿ ಕೊನೆಗೆ ವಂದಿಸಿದರು.