
ಮಂಗಳೂರು ಜನ್ಮಭೂಮಿ ಫೌಂಡೇಶನ್ ಹಾಗೂ ಜನ್ಮಭೂಮಿ ಸಂಸ್ಕಾರ ಕೇಂದ್ರದ ಆಶ್ರಯದಲ್ಲಿ ಸೂರ್ಯನಾರಾಯಣದೇವರ ಸನ್ನಿಧಿಯಲ್ಲಿ ಜನ್ಮಭೂಮಿ ಸಂಸ್ಕಾರ ಕೇಂದ್ರದ ಒಂಬತ್ತನೇ ವಾರ್ಷಿಕೋತ್ಸವ ಕೃಷ್ಣೋತ್ಸವವಾಗಿ ಸೆಪ್ಟೆಂಬರ್ 4ರಂದು ಆಚರಿಸಲ್ಪಡಲಿದೆ. ಸಪ್ಟೆಂಬರ್ 4ರಂದು ನಂದಗೋಕುಲದತ್ತ ಮುದ್ದು ರಾಧಾಕೃಷ್ಣರ ಹೆಜ್ಜೆ ಎನ್ನುವ ನೂತನ ಕಾರ್ಯಕ್ರಮದ ಪ್ರಯುಕ್ತ ಭಕ್ತರಿಂದ ಕೃಷ್ಣೋತ್ಸವ ನಡೆಯಲಿದೆ.
ಮೊದಲ ಸುತ್ತು ನೃತ್ಯಭಜನಾ ಪ್ರದಕ್ಷಣೆ, ಎರಡನೆಯ ಸುತ್ತು ಯಕ್ಷಗಾನದ ಪ್ರದಕ್ಷಿಣೆ, ಮೂರನೆಯ ಸುತ್ತು ಕೋಲಾಟ ಪ್ರದಕ್ಷಣೆ ಮತ್ತು ಕೊನೆಯಲ್ಲಿ ದೇವರ ಮುಂಭಾಗದಲ್ಲಿ ರಾಧಾಕೃಷ್ಣ ವೇಷಧಾರಿ ಮಕ್ಕಳು ಮತ್ತು ಪೋಷಕರೊಂದಿಗೆ ಕೃಷ್ಣ ನೃತ್ಯೋತ್ಸವ, ತಾಯಂದಿರು ಮಕ್ಕಳೊಂದಿಗೆ ಯಶೋಧೆ ವೇಷಧಾರಿಯಾಗಿ ಭಾಗವಹಿಸಲು ಅವಕಾಶ ಇರುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕೃಷ್ಣ ಎಸ್ ಆರ್ ಮರೋಳಿ, ಅಧ್ಯಕ್ಷ ರಂಜಿತ್ ಮರೋಳಿ, ಗಣೇಶ್ ಶೆಟ್ಟಿ ಜಪ್ಪು, ಜಗದೀಶ್ ಗರೋಡಿ, ಪುನೀತ್ ಹಾಗೂ ಇತರರು ಹಾಜರಿದ್ದರು.
ವರದಿ ರಾಯಿ ರಾಜ ಕುಮಾರ್
