ಹಣಕ್ಕಿಂತ ಬದುಕು, ಜೀವನ ಮುಖ್ಯ ಮಗುವಿಗೆ ಅಪ್ಪ, ಪೂಜಾ ಗೆ ಗಂಡ ಸಿಗಬೇಕು -ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ

0
6

ಪುತ್ತೂರು : ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಮಗ ಕೃಷ್ಣ ರಾವ್ ಪೂಜಾಳಿಗೆ ಈಗಾಗಲೇ ಮಗುವನ್ನು ಕೊಟ್ಟಿರುವುದು ಎಲ್ಲರಿಗೂ ತಿಳಿದಿದೆ. ಹೀಗಿರುವಾಗ ಕೋಮು ಗಲಭೆಯನ್ನು ಎಬ್ಬಿಸಿ ರಾಜಕೀಯ ಲಾಭವನ್ನು ಪಡೆಯಲು ಹವಣಿಸುತ್ತಿರುವ ಜಗನ್ನಿವಾಸ ರಾವ್ ಅವರ ಮನೆಗೆ ಎಲ್ಲರೂ ಆಗಮಿಸಿ ಅನ್ಯಾಯವಾದ ಹುಡುಗಿಗೆ ಬದುಕನ್ನು, ಜೀವನವನ್ನು ಕೊಡುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡಬೇಕೆ ಹೊರತು ಪತ್ರಿಕಾಗೋಷ್ಠಿ ಕರೆದು ಉಪಯೋಗವಿಲ್ಲ.

ನ್ಯಾಯಾಲಯದಿಂದ ಪ್ರತಿ ತಿಂಗಳು 75,000 ಪರಿಹಾರ ಧನ ಆಕೆಗೆ ಈಗಾಗಲೇ ದೊರೆಯುತ್ತಿದೆ. ಆದರೆ ಅದರಿಂದ ಬದುಕು, ಜೀವನ ಅಸಾಧ್ಯ. ಏಕೆಂದರೆ ಪೂಜಾಳಿಗೆ ಕೃಷ್ಣನೊಂದಿಗೆ ಮದುವೆಯಾಗಬೇಕು. ಅವರಿಗೆ ಹುಟ್ಟಿದ ಮಗುವಿಗೆ ತಂದೆ ದೊರಕಬೇಕು ಆಗಲೇ ಅವರ ಬದುಕು ಗಟ್ಟಿ ಗೊಳ್ಳುತ್ತದೆ. ಆದುದರಿಂದ ತಾಕತ್ತಿದ್ದವರು, ನೈತಿಕತೆ ಇದ್ದವರು ನೇರವಾಗಿ ಮದುವೆಯನ್ನು ಮಾಡಿಸಿ ಪೂಜಾಗೆ ಗಂಡನನ್ನು, ಅವರ ಮಗುವಿಗೆ ಅಪ್ಪನನ್ನು ಕೊಡಿಸುವ ಪ್ರಯತ್ನವನ್ನು ಮಾಡಬೇಕು ಎನ್ನುವುದು ನನ್ನ ಮೂಲ ಉದ್ದೇಶ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಹಿಂದೂ ಪಂಗಡಕ್ಕೆ ಸೇರಿದ ಹುಡುಗಿಗೆ ಅನ್ಯಾಯವಾಗಿದ್ದರೆ, ಎಲ್ಲರಿಗೂ ನನ್ನ ಬೆಂಬಲ ಸದಾ ಇದೆ. ಅಂತಹ ಯಾವುದೇ ಹುಡುಗಿಗೂ ಅನ್ಯಾಯವಾಗಲು ನಾನು ಎಂದಿಗೂ ಬಿಡುವುದಿಲ್ಲ ಎಂದು ಖಡಾಖಂಡಿತವಾಗಿ ಪ್ರತಿಭಾ ಕುಳಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಮಂಗಳೂರು ಜಿಲ್ಲಾಧಿಕಾರಿಗಳ ಬಂಗಲೆ ಎದುರು ಹೆಂಡತಿಯ ಹೆಸರನ್ನು ಹಾಕಲು ಹೇಗೆ ಸಾಧ್ಯವಾಗುತ್ತದೆ? ಹೆಂಡತಿ ಸರಕಾರಿ ಹುದ್ದೆಯಲ್ಲಿ ಇದ್ದಾರೆಯೇ? ಸರಕಾರಿ ಬಂಗಲೆ ಯಾರ ಹೆಸರಲ್ಲಿ ನೀಡಲಾಗಿದೆ? ಈಗಾಗಲೇ ಈ ಬಗ್ಗೆ ಸಾಕಷ್ಟು ತಿಳುವಳಿಕೆಯನ್ನು ನೀಡಿದ್ದರೂ ಸರಿಪಡಿಸುವ ಪ್ರಯತ್ನ ಮಾಡದೇ ಇರುವುದು ಆಶ್ಚರ್ಯವನ್ನು ಹುಟ್ಟಿಸಿದೆ. ಉದ್ಧಟತನ ತೋರಿಸುತ್ತಿರುವ ಜಿಲ್ಲಾಧಿಕಾರಿಗಳ ಮೇಲೆ ಕಾನೂನಾತ್ಮಕವಾದ ಕ್ರಮ ಕೈಗೊಳ್ಳಲು ಹೋರಾಟವನ್ನು ತೀವ್ರಗೊಳಿಸುತ್ತೇನೆ.

ನಿರ್ಮಿತಿ ಕೇಂದ್ರದವರು ಬಂಗಲೆಯ ಒಳಗೆ ನಿರ್ಮಿಸುತ್ತಿರುವ ಸ್ವಿಮ್ಮಿಂಗ್ ಪೂಲನ್ನು ಇದೀಗ ಇಂಗು ಗುಂಡಿಯಾಗಿ ಪರಿವರ್ತಿಸಲು ಪ್ರಯತ್ನ ನಡೆದಿದೆ. ಏನೇ ಇದ್ದರೂ ಆ ಎಲ್ಲಾ ರಚನೆಗಳಿಗೆ ಹಣ ಎಲ್ಲಿಂದ? ಯಾರು ಅಷ್ಟೊಂದು ಹಣವನ್ನು ನೀಡುತ್ತಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಬೇಕಾಗಿದೆ. ಸರಕಾರದ ಸ್ವತ್ತು ಮಕ್ಕಳಿಗೆ, ಮನೆಯವರಿಗೆ ತಿರುಗಾಡಲು ಮಜಾ ಮಾಡಲು ಇರುವುದು ಅಲ್ಲ. ಅದು ಜಿಲ್ಲಾಧಿಕಾರಿಗಳ ಹುದ್ದೆಗೆ ಸಾರ್ವಜನಿಕರ ದೊರಕಿರುವ ಸೌಲಭ್ಯ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟದ ತೀವ್ರತೆ ಹೆಚ್ಚುಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದರು.