ದೇಶದ ಅಭಿವೃದ್ಧಿಯಲ್ಲಿ ಎಲ್​ಐಸಿ ಪಾತ್ರ ಹಿರಿದು

0
7

ಉಡುಪಿ: ಭಾರತೀಯ ಜೀವವಿಮಾ ನಿಗಮ ಜನತೆಯ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗಮನೀಯ ಪಾತ್ರ ವಹಿಸಿದೆ ಎಂದು ಎಲ್​ ಐ ಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಗಣಪತಿ ಭಟ್​ ಹೇಳಿದರು.

ಎಲ್​ ಐ ಸಿ ವಿಭಾಗೀಯ ಕಚೇರಿಯಲ್ಲಿ ಮಂಗಳವಾರ ನಡೆದ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

1956ರ ಸೆ.1ರಂದು 245 ಸಂಸ್ಥೆಗಳ ಒಗ್ಗೂಡುವಿಕೆಯಿಂದ ರಾಷ್ಟ್ರೀಕರಣಗೊಂಡ ಎಲ್​ಐಸಿ ಬೃಹದಾಕಾರವಾಗಿ ಬೆಳೆದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಉಡುಪಿ ವಿಭಾಗ ಗಮನೀಯ ಸಾಧನೆ ಮಾಡಿದ್ದು 1,33,316 ಪಾಲಿಸಿ ವಿಕ್ರಯಿಸುವ ಮೂಲಕ 508.7 ಕೋಟಿ ಪ್ರಥಮ ಪ್ರೀಮಿಯಂ ಆದಾಯ ಗಳಿಸಿದೆ. 1,39,693 ಪಾಲಿಸಿಗಳ 1,138.75 ಕೋಟಿ ರೂ. ಕ್ಲೆಮ್​ ಪಾವತಿಸಿದೆ ಎಂದರು. ಯೂನಿಯನ್​ ಬ್ಯಾಂಕ್​ ಉಡುಪಿ ವಲಯ ಮುಖ್ಯಸ್ಥ ಅಶೋಕ್​ ಬಾಂಡಗಿ ಅಭ್ಯಾಗತರಾಗಿದ್ದರು.ಎಲ್​ ಐಸಿ ಪ್ರಬಂಧಕ (ಮಾರುಕಟ್ಟೆ) ಗುರುದಾಸ್​ ಎಸ್​.ರಾವ್​ ಉಪಸ್ಥಿತರಿದ್ದರು.

ಎಲ್​ ಐ ಸಿ ಪ್ರಬಂಧಕ (ವಿಕ್ರಯ) ದುರ್ಗಾರಾಮ್​ ಶೆಣೈ ಸ್ವಾಗತಿಸಿ, ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಉಪಶ್ರೇಣಿ ಸಹಾಯಕ ಬಾಲಕೃಷ್ಣ ಶೆಣೈ ಸಹಕರಿಸಿದರು.