ಉಡುಪಿ: ಭಾರತೀಯ ಜೀವವಿಮಾ ನಿಗಮ ಜನತೆಯ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗಮನೀಯ ಪಾತ್ರ ವಹಿಸಿದೆ ಎಂದು ಎಲ್ ಐ ಸಿ ಉಡುಪಿ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಗಣಪತಿ ಭಟ್ ಹೇಳಿದರು.
ಎಲ್ ಐ ಸಿ ವಿಭಾಗೀಯ ಕಚೇರಿಯಲ್ಲಿ ಮಂಗಳವಾರ ನಡೆದ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
1956ರ ಸೆ.1ರಂದು 245 ಸಂಸ್ಥೆಗಳ ಒಗ್ಗೂಡುವಿಕೆಯಿಂದ ರಾಷ್ಟ್ರೀಕರಣಗೊಂಡ ಎಲ್ಐಸಿ ಬೃಹದಾಕಾರವಾಗಿ ಬೆಳೆದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಉಡುಪಿ ವಿಭಾಗ ಗಮನೀಯ ಸಾಧನೆ ಮಾಡಿದ್ದು 1,33,316 ಪಾಲಿಸಿ ವಿಕ್ರಯಿಸುವ ಮೂಲಕ 508.7 ಕೋಟಿ ಪ್ರಥಮ ಪ್ರೀಮಿಯಂ ಆದಾಯ ಗಳಿಸಿದೆ. 1,39,693 ಪಾಲಿಸಿಗಳ 1,138.75 ಕೋಟಿ ರೂ. ಕ್ಲೆಮ್ ಪಾವತಿಸಿದೆ ಎಂದರು. ಯೂನಿಯನ್ ಬ್ಯಾಂಕ್ ಉಡುಪಿ ವಲಯ ಮುಖ್ಯಸ್ಥ ಅಶೋಕ್ ಬಾಂಡಗಿ ಅಭ್ಯಾಗತರಾಗಿದ್ದರು.ಎಲ್ ಐಸಿ ಪ್ರಬಂಧಕ (ಮಾರುಕಟ್ಟೆ) ಗುರುದಾಸ್ ಎಸ್.ರಾವ್ ಉಪಸ್ಥಿತರಿದ್ದರು.
ಎಲ್ ಐ ಸಿ ಪ್ರಬಂಧಕ (ವಿಕ್ರಯ) ದುರ್ಗಾರಾಮ್ ಶೆಣೈ ಸ್ವಾಗತಿಸಿ, ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಉಪಶ್ರೇಣಿ ಸಹಾಯಕ ಬಾಲಕೃಷ್ಣ ಶೆಣೈ ಸಹಕರಿಸಿದರು.

