ಶ್ರೀ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.1 ಲಕ್ಷ ಅನುದಾನ

0
11

ಉಪ್ಪೂರು: ಉಪ್ಪೂರು ಪರಾರಿ ಗ್ರಾಮದ ಶ್ರೀ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ.1 ಲಕ್ಷ ಅನುದಾನ ನೀಡಲಾಯಿತು.

ಅನುದಾನದ ರೂ.1 ಲಕ್ಷ ಮೊತ್ತದ ಚೆಕ್ಕನ್ನು ಉಡುಪಿ ತಾಲೂಕಿನ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರಾಜು ಪೂಜಾರಿ ಹಾಗೂ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ಅವರು ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಭಟ್ ಕೊಳಲಗಿರಿ, ಗೌರವಾಧ್ಯಕ್ಷರಾದ ಸತೀಶ್ ಪೂಜಾರಿ ಕೀಳಂಜಿ ಹಾಗೂ ಪ್ರಧಾನ ಅರ್ಚಕರಾದ ಲಕ್ಷ್ಮೀಶ್ ಭಟ್ ಪರಾರಿ ಅವರಿಗೆ ಹಸ್ತಾಂತರಿಸಿದರು.

ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾದ ಅನುದಾನವು ಸಹಕಾರಿಯಾಗಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಸಂರಕ್ಷಣಾ ಕಾರ್ಯಗಳಿಗೆ ವಿವಿಧ ಹಂತಗಳಲ್ಲಿ ಸಹಕಾರ ನೀಡುತ್ತಿರುವ ಯೋಜನೆಯ ಕಾರ್ಯವನ್ನು ಉಪಸ್ಥಿತರಿದ್ದವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಉಪ್ಪೂರು ವಲಯ ಅಧ್ಯಕ್ಷರಾದ ಸುನಿಲ್ ಶೆಟ್ಟಿ, ಒಕ್ಕೂಟದ ಅಧ್ಯಕ್ಷರಾದ ಜಯಕರ ಆಚಾರ್ಯ, ಉಪಾಧ್ಯಕ್ಷರಾದ ಜ್ಯೋತಿ ಪಾಟೀಲ್, ಕೋಶಾಧಿಕಾರಿ ಕೃಷ್ಣರಾಜ ಭಟ್, ಗುರಿಕಾರ ಗಣೇಶ್ ನಾಯ್ಕ್, ಸಮಾಜ ಸೇವಕಿ ರೇಖಾ ಜಿ. ಮರಾಠಿ, ಒಕ್ಕೂಟದ ಪದಾಧಿಕಾರಿ ಸುನೀತಾ ಪೂಜಾರ್ತಿ, ಸುನಂದಾ, ವಲಯ ಮೇಲ್ವಿಚಾರಕರಾದ ರಾಮು, ಸ್ಥಳೀಯ ಸೇವಾ ಪ್ರತಿನಿಧಿ ಸುಧಾಕರ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.